ಸಾಮಾಜಿಕ ತಾಣದಲ್ಲಿ ಹಳೆಯ ವೀಡಿಯೋ ಒಂದು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಪತ್ರಕರ್ತ ಜಲೀಲ್ ಕಣ್ಣಮಂಗಲಂ ನೀಡಿರುವ ವಿವರಣೆ
09/03/2021
ಪ್ರಶ್ನೆ: ಮಾರ್ಚ್ 31 ರಂದು ಸೌದಿ ಗಡಿ ಸಂಪೂರ್ಣವಾಗಿ ತೆರೆಯಲಿದೆ ಎಂಬುದು ನಿಜವೇ?
ಉತ್ತರ: ನಿಜವಲ್ಲ . ಸೌದಿ ಅರೇಬಿಯಾಕ್ಕೆ ಭಾಗಶಃ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದೆ.. ಸೌದಿ ಅರೇಬಿಯಾ ತನ್ನ ಗಡಿಗಳನ್ನು ಸಂಪೂರ್ಣವಾಗಿ ತೆರೆಯಲು ಮತ್ತು ವಾಯು ಸೇವೆಗಳನ್ನು ಪೂರಣವಾಗಿ ಪುನಃಸ್ಥಾಪಿಸಲು 2021 ಮೇ 17 ರವರೆಗೆ ಕಾಯಬೇಕಾಗುತ್ತದೆ ಎಂದು ಸೌದಿ ಆಂತರಿಕ ಸಚಿವಾಲಯ ಹೇಳಿದೆ.
ಈ ಹಿಂದೆ ಜನವರಿ ಆರಂಭದಲ್ಲಿ ತೆರೆಯಲಾಗುವುದು ಎಂದು ಹೇಳಲಾಗಿತ್ತು. ನಂತರ ಇದನ್ನು ಮಾರ್ಚ್ 31 ಕ್ಕೆ ಮುಂದೂಡಿತು ಮತ್ತೆ ಮೇ 17 ಕ್ಕೆ ವಿಸ್ತರಿಸಲಾಯಿತು. ಮಾರ್ಚ್ 31 ರಂದು ತೆರೆಯುವುದಾಗಿ ಈ ಹಿಂದೆ ಗೃಹ ಸಚಿವಾಲಯ ಘೋಷಿಸಿದ ಸಂಧರ್ಭದಲ್ಲಿ ಹೊರಬಂದ ಸುದ್ದಿಯನ್ನು ಈಗ ಅನೇಕರು ಹರಡುತ್ತಿದ್ದಾರೆ. ಇದನ್ನು ಮೇ 17 ಕ್ಕೆ ವಿಸ್ತರಿಸಲಾಗಿದೆ.
ಆನುವಂಶಿಕವಾಗಿ ಮಾರ್ಪಡಿಸಿದ ಕೋವಿಡ್ ಹರಡುವುದನ್ನು ತಡೆಯಲು ಡಿಸೆಂಬರ್ 21 ರಂದು ಸೌದಿ ಅರೇಬಿಯಾ ತನ್ನ ಗಡಿಗಳನ್ನು ಎರಡು ವಾರಗಳವರೆಗೆ ಸಂಪೂರ್ಣವಾಗಿ ಮುಚ್ಚಿತು. ಇದು ಜನವರಿ 3 ರಂದು ಅದು ತೆರೆಯ್ತು ಮತ್ತು ಭಾಗಶಃ ವಿಮಾನ ಸೇವೆಗಳನ್ನು ಪುನರಾರಂಭಿಸಿತು. ಫೆಬ್ರವರಿ 3, 2021 ರಂದು ಯುಎಇ ಮತ್ತು ಭಾರತ ಸೇರಿದಂತೆ 20 ದೇಶಗಳಿಂದ ನೇರ ವಿಮಾನಯಾನವನ್ನು ನಿಷೇಧಿಸಲಾಯಿತು.
ಈ ನಿಷೇಧವು ಅನಿರ್ದಿಷ್ಟ ಅವಧಿಗೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತ ಮತ್ತು ಯುಎಇ ಸೇರಿದಂತೆ ದೇಶಗಳಿಂದ ಸೌದಿ ಅರೇಬಿಯಾಕ್ಕೆ ನೇರ ವಿಮಾನ ಹಾರಾಟ ಆರಂಭಗೊಳ್ಳಲು ಎಷ್ಟು ಸಮಯ ಕಾಯಬೇಕಿದೆ ಎಂಬುದು ಸ್ಪಷ್ಟವಲ್ಲ.
ಜಲೀಲ್ ಕಣ್ಣಮಂಗಲಂ: 08-03-21