janadhvani

Kannada Online News Paper

ಅವಲಂಬಿತರು ವಿದೇಶದಲ್ಲಿದ್ದರೂ ಇಖಾಮಾ ನವೀಕರಿಸಬಹುದು- ಜವಾಝಾತ್

ರಿಯಾದ್: ಅವಲಂಬಿತ ವೀಸಾ ಹೊಂದಿರುವವರು ಈಗ ವಿದೇಶದಲ್ಲಿದ್ದರೂ ಸೌದಿ ಅರೇಬಿಯಾದಲ್ಲಿರುವ ಕುಟುಂಬ ಮುಖ್ಯಸ್ಥನ ಇಕಾಮಾವನ್ನು ನವೀಕರಿಸಬಹುದು ಎಂದು ಜವಾಝಾತ್ ನಿರ್ದೇಶನಾಲಯ ತಿಳಿಸಿದೆ. ಯಾವುದೇ ಅವಲಂಬಿತರ ಪಾಸ್‌ಪೋರ್ಟ್ ಅವಧಿ ಮುಗಿದಿದ್ದರೂ ಸಹ, ಕುಟುಂಬ ಮುಖ್ಯಸ್ಥನ ಇಕಾಮಾ ನವೀಕರಣಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ.

ಇಕಾಮಾ ನವೀಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯಾಗಿ ಜವಾಝಾತ್ ಈ ವಿಷಯ ತಿಳಿಸಿದೆ. ಯಾವುದೇ ಅವಲಂಬಿತರ ಪಾಸ್‌ಪೋರ್ಟ್ ಅವಧಿ ಮುಗಿದಿದ್ದರೆ ಮತ್ತು ಕುಟುಂಬದ ಮುಖ್ಯಸ್ಥರು ಸೌದಿ ಅರೇಬಿಯಾದಲ್ಲಿದ್ದರೆ ಹಾಗೂ ಯಾವುದೇ ಅವಲಂಬಿತರು ವಿದೇಶದಲ್ಲಿದ್ದರೆ,ಕುಟುಂಬ ಮುಖ್ಯಸ್ಥರ ಇಕಾಮಾವನ್ನು ನವೀಕರಿಸಲು ಯಾವುದೇ ಅಡೆತಡೆಗಳಿಲ್ಲ.

ವಲಸಿಗರ ಮರು ಪ್ರವೇಶವನ್ನು(ರೀ ಎಂಟ್ರಿ) ಆನ್‌ಲೈನ್‌ನಲ್ಲಿ ವಿಸ್ತರಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜವಾಝಾತ್ ಹೇಳಿದೆ.