janadhvani

Kannada Online News Paper

ಇಂದು ಅಸಾಸ್ ಮಲ್ಲೂರಿನಲ್ಲಿ ಮಾಸಿಕ ಅಹ್ಲ್ ಬದ್ರ್ ಮಜ್ಲಿಸ್

ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯಾಗಿದೆ ಅಸಾಸ್ ಎಜುಕೇಶನಲ್ ಸೆಂಟರ್ ಮಲ್ಲೂರು. ಇದರ ಅಧೀನದಲ್ಲಿ ಮಾಸಂಪ್ರತಿ ಆಚರಿಸಿಕೊಂಡು ಬರುವ ಮಜ್ಲಿಸ್ ಅಹ್ಲ್ ಬದ್ರ್ ನ ಮಾರ್ಚ್‌ ತಿಂಗಳ ಸಂಗಮ ಇಂದು (5-3-21) ಶುಕ್ರವಾರ ಮಗ್ರಿಬ್ ನಮಾಜ್ ಬಳಿಕ ಶೈಖಾ ರಿಫಾಯಿ ಜುಮಾ ಮಸ್ಜಿದ್ ನಲ್ಲಿ, ಸಂಸ್ಥೆಯ ಪ್ರಧಾನ ಮುದರ್ರಿಸರಾದ ಸಯ್ಯದ್ ನಿಝಾಮುದ್ದೀನ್ ಬಾಫಖೀ ತಂಙಳರವರ ನೇತೃತ್ವದಲ್ಲಿ ನಡೆಯಲಿದೆ.

ಸಂಸ್ಥೆಯ ಸಾರಥಿ ಮಲ್ಲೂರು MPM ಅಶ್ರಫ್ ಅ ಅದಿ ಉಸ್ತಾದರಿಂದ ಉದ್ಬೋಧನೆ ನಡೆಯಲಿದೆ. ವಿಶೇಷ ಅತಿಥಿ ಯಾಗಿ ಪಂಪ್ವೆಲ್ ಮಸ್ಜಿದ್ ತಖ್ವಾ ಇದರ ಪ್ರಧಾನ ಕಾರ್ಯದರ್ಶಿಯಾದ ಹಾಜೀ ಮಮ್ತಾಝ್ ಆಲೀ ಕೃಷ್ಣಾಪುರ ಹಾಗೂ Table four group jubail KSA ಇದ ಡೈರೇಕ್ಟರಾದ ಮುಬೀನ್ ಇವರು ಭಾಗವಹಿಸಲಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಿಗೆ ಹಾಗೂ ಸಂಸ್ಥೆಯ ಅಧೀನದಲ್ಲಿ ಕಾರ್ಯಚಾರಿಸುತ್ತಿರುವ ಮುಹಬ್ಬತೇ ಅಸಾಸ್ ಸಮಿತಿಯ ಪಧಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಕಾರ್ಯಕ್ರಮ KSOCR ಬ್ರಾಡ್ ಕಾಸ್ಟ್ ನಲ್ಲಿ ನೇರಪ್ರಸಾರವಾಗಲಿ‌ದೆ.‌

ಈ ಎಲ್ಲಾ ಕಾರ್ಯಕ್ರಮದ ವಿವರವವನ್ನು ಮುಹಬ್ಬತೇ ಅಸಾಸ ಇದರ ಅಧ್ಯಕ್ಷರಾದ ಖಲೀಲ್ ಅಬ್ಬೆಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com