janadhvani

Kannada Online News Paper

ಸೌದಿಯಲ್ಲಿ 43,428 ಕೋವಿಡ್ ನಿಯಮ ಉಲ್ಲಂಘನೆಗಳು ದಾಖಲು

ಕೋವಿಡ್ ಹರಡುವಿಕೆಯನ್ನು ತಡೆಯಲು ಸೌದಿ ಅರೇಬಿಯಾದಲ್ಲಿ ಕಟ್ಟುನಿಟ್ಟಾದ ಸುರಕ್ಷಿತ ಕ್ರಮಗಳನ್ನು ಪಾಲಿಸಲು ಅಧಿಕಾರಿಗಳು ಈ ಮೊದಲೇ ಸೂಚಿಸಲಾಗಿದೆ. ಅದನ್ನು ಪಾಲಿಸದವರಿಗೆ ಬಹುದೊಡ್ಡ ಮೊತ್ತಗಳನ್ನು ದಂಡವಾಗಿ ವಿಧಿಸಲಾಗುತ್ತದೆ.

ಕಳೆದ ಒಂದು ವಾರದಲ್ಲಿ ಸೌದಿ ಅರೇಬಿಯಾದಲ್ಲಿ ಒಟ್ಟು 43,428 ನಿಯಮ ಉಲ್ಲಂಘನೆಗಳು ದಾಖಲಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಇದರಲ್ಲಿ ರಿಯಾದ್ 17,789 ಮಕ್ಕತುಲ್ ಮುಕರ್ರಮ 10,388 ಪೂರ್ವ ಪ್ರಾಂತ್ಯದಲ್ಲಿ 4,819 ಅಲ್-ಕಸೀಮ್ 2,513 ಮದೀನಾ 1,748 ತಬೂಕ್ 1,402 ಜೌಫ್ 1,332 ಅಲ್-ಬಹಾ 888 ಹೈಲ್ 852 ಅಸೀರ್ 739 ಉತ್ತರ ಪ್ರಾಂತ್ಯ 488 ಜಿಝಾನ್ 315 ಹಾಗೂ ನಜ್ರಾನ್ ನಲ್ಲಿ 155 ಉಲ್ಲಂಘನೆಗಳು ನಡೆದಿದೆ.

ಕೋವಿಡ್ ಹರಡುವಿಕೆಯನ್ನು ತಡೆಯಲು ಸರಕಾರ ಹೊರಡಿಸಿದ ಸುರಕ್ಷಿತ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಸಚಿವಾಲಯ ಕರೆ ನೀಡಿದೆ.

error: Content is protected !! Not allowed copy content from janadhvani.com