janadhvani

Kannada Online News Paper

ವಿದೇಶದಿಂದ ಭಾರತಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಸೂಚನೆ

ನವದೆಹಲಿ: ಕೋವಿಡ್ ನಿಯಂತ್ರಣದ ಭಾಗವಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ವಿಮಾನಯಾನ ಸಂಸ್ಥೆಗಳು ವಿದೇಶದಿಂದ ಆಗಮಿಸುವವರಿಗೆ ವಿಶೇಷ ಸೂಚನೆಗಳನ್ನು ನೀಡಿದೆ. ಪ್ರಯಾಣಿಕರು ನಿರ್ಗಮಿಸುವ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ Self Declaration ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

Self Declaration ಫಾರ್ಮ್ ಅನ್ನು www.newdelhiairport.in ವೆಬ್‌ಸೈಟ್ ಮೂಲಕ ಭರ್ತಿ ಮಾಡಬೇಕು. ಕಳೆದ 14 ದಿನಗಳಲ್ಲಿ ನಡೆಸಿದ ಇತರ ಪ್ರವಾಸಗಳ ವಿವರಗಳನ್ನು ಈ ಫಾರ್ಮ್ ನಲ್ಲಿ ನೀಡಬೇಕು. ನಿರ್ಗಮಿಸುವ 72 ಗಂಟೆಗಳ ಒಳಗೆ ನಡೆಸಿದ ಕೋವಿಡ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ಕೈಯಲ್ಲಿ ಇಟ್ಟುಕೊಂಡು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಭಾರತದಲ್ಲಿನ ವಿಮಾನ ನಿಲ್ದಾಣಗಳಿಗೆ ಆಗಮಿಸಿದ ಮೇಲೆ ಮೋಳಿಕ್ಯೂಲರ್ (ಆಣ್ವಿಕ ಪರೀಕ್ಷೆ) ಅಗತ್ಯ. ವೆಚ್ಚವನ್ನು ಸ್ವತಃ ಭರಿಸಬೇಕಾಗುತ್ತದೆ. ಇದು ಕೊಲ್ಲಿ ರಾಷ್ಟ್ರಗಳು, ಯುಕೆ ಮತ್ತು ಯುರೋಪಿನಿಂದ ಆಗಮಿಸುವ ಪ್ರಯಾಣಿಕರಿಗೆ ಅನ್ವಯಿಸುತ್ತದೆ.

ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಹೊಸ ನಿಯಮಗಳು ಫೆಬ್ರವರಿ 22, 2021 ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. ಭಾರತದ ಒಂದು ವಿಮಾನ ನಿಲ್ದಾಣದಲ್ಲಿ ಇಳಿದು ನಂತರ ಮತ್ತೊಂದು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಎರಡು ವಿಮಾನಗಳ ನಡುವೆ ಆರರಿಂದ ಎಂಟು ಗಂಟೆಗಳ ಸಮಯವನ್ನು ವ್ಯವಸ್ಥೆಗೊಳಿಸಲು ಸೂಚಿಸಲಾಗಿದೆ.ಇದು ಪರೀಕ್ಷೆಗೆ ಅಗತ್ಯವಿರುವ ಸಮಯವಾಗಿದೆ.

error: Content is protected !! Not allowed copy content from janadhvani.com