janadhvani

Kannada Online News Paper

ದುಬೈ ಪ್ರಯಾಣಿಕರ ಪಿಸಿಆರ್ ರಿಪೋರ್ಟ್ ನಲ್ಲಿ ಕ್ಯೂಆರ್ ಕೋಡ್ ಕಡ್ಡಾಯ

ದುಬೈ : ದುಬೈಗೆ ಪ್ರಯಾಣಿಸುವ ಸಂದರ್ಭದಲ್ಲಿ ಪಡೆಯಲಾಗುವ ಕೋವಿಡ್ ನೆಗೆಟಿವ್ ವರದಿ, ಪಿಸಿಆರ್‌ನಲ್ಲಿ ಕ್ಯೂಆರ್ ಕೋಡ್ ಕಡ್ಡಾಯಗೊಳಿಸಲಾಗಿದೆ. ಈ ನಿರ್ದೇಶನವನ್ನು ದುಬೈ ಆರೋಗ್ಯ ಪ್ರಾಧಿಕಾರ ಹೊರಡಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಹಿತವಿರುವ ವಿಮಾನಯಾನ ಸಂಸ್ಥೆಗಳು ಸಹ ಈ ಸೂಚನೆ ನೀಡಿದೆ.

ಪರೀಕ್ಷಾ ಫಲಿತಾಂಶದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಮಾದರಿ ಸಂಗ್ರಹ ಸಮಯ ಮತ್ತು ಪರೀಕ್ಷೆ ಪೂರ್ಣಗೊಂಡ ಸಮಯದ ವಿವರಗಳು ಲಭ್ಯವಿರಬೇಕು. ಕ್ಯೂಆರ್ ಕೋಡ್ ಇಲ್ಲದೆ ಪಿಸಿಆರ್ ಫಲಿತಾಂಶದೊಂದಿಗೆ ದುಬೈಗೆ ಪ್ರಯಾಣಿಸಲು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ.

ಯುಎಇಯಲ್ಲಿ ನಿನ್ನೆ ಕೋವಿಡ್ ಸೋಂಕಿನಿಂದ 14 ಜನರು ಮೃತಪಟ್ಟಿದ್ದಾರೆ.ಇದರೊಂದಿಗೆ ಮರಣ ಸಂಖ್ಯೆ 1,055 ಕ್ಕೆ ಏರಿದೆ. 3452 ಜನರಿಗೆ ಹೊಸದಾಗಿ ರೋಗ ಪತ್ತೆಯಾಗಿದೆ. 3570 ಜನರು ರೋಗದಿಂದ ಗುಣಮುಖರಾದರು. ಒಟ್ಟು ಪ್ರಕರಣಗಳ ಸಂಖ್ಯೆ 3,58,583. ಒಟ್ಟು ರೋಗಿಗಳ ಸಂಖ್ಯೆ 3,43,935.

error: Content is protected !! Not allowed copy content from janadhvani.com