ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಲಂಗು ಲಗಾಮಿಲ್ಲದೆ ಓಡುತ್ತಿದೆ. ದಿನ ನಿತ್ಯ ಗಿಡಗಳು ಬೆಳೆದಂತೆ ತೈಲ ದರವು ದಿನ ನಿತ್ಯ ಬೆಳೆಯುತ್ತಿದೆ. ಕಳೆದ 9 ದಿನಗಳಿಂದ ಪ್ರತಿನಿತ್ಯ ಕೊಂಚ ಕೊಂಚವಾಗೇ ಪೆಟ್ರೋಲ್, ಡೀಸೆಲ್ ದರ ಏರುತ್ತಿದೆ. 9ನೇ ದಿನವಾದ ಇಂದು(ಬುಧವಾರ) ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು 25 ಪೈಸೆ ಹೆಚ್ಚಳವಾಗಿದೆ.
ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನದ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಈಗಾಗಲೇ ಸುಂಕ ಕಡಿತಗೊಳಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಇನ್ನು ಇಂದು ತೈಲ ದರ 25 ಪೈಸೆ ಹೆಚ್ಚಳವಾಗುವ ಮೂಲಕ ಸಾರ್ವಕಾಲಿಕವಾಗಿ ದಾಖಲೆಯತ್ತ ತೈಲದ ಬೆಲೆ ಏರಿದೆ. ಕಳೆದ 9 ದಿನಗಳಿಂದ ಪೆಟ್ರೋಲ್ ಬೆಲಯಲ್ಲು 2.61 ರೂ. ಏರಿದರೆ, 3.16 ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಇನ್ನು ಈ ರೀತಿ ಏರುತ್ತಲೇ ಹೋದರೆ ಮುಂಬಯಿನಂತ ನಗರದಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 100 ರೂ.ಗೆ ತಲುವುದರ ಬಗ್ಗೆ ಯಾವುದೇ ಡೌಟಿಲ್ಲ. ಹಾಗಾದರೆ ಯಾವ ನಗರಗಳಲ್ಲಿ ಎಷ್ಟು ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ. ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಸತತ 8ನೇ ದಿನವೂ ಏರಿಕೆ ಕಂಡ ಇಂಧನ ದರ: ಬೆಂಗಳೂರಿನಲ್ಲಿ 92ರ ಗಡಿ ದಾಟಿದ ಪೆಟ್ರೋಲ್
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.
ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 92.54ರೂ.
ಡೀಸೆಲ್: 84.75ರೂ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿ
ಪೆಟ್ರೋಲ್: 89.54 ರೂ.
ಡೀಸೆಲ್: 79.95 ರೂ.
ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 96.00 ರೂ.
ಡೀಸೆಲ್: 886.98 ರೂ.
ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್: 91.68 ರೂ.
ಡೀಸೆಲ್:85.01 ರೂ.