ರಿಯಾದ್: ಸೌದಿ ಅರೇಬಿಯಾದ ಅಬಹಾ ವಿಮಾನ ನಿಲ್ದಾಣದ ಮೇಲೆ ಹೂತಿಗಳು ನಡೆಸಿದ ದಾಳಿಯಿಂದ ವಿಮಾನಕ್ಕೆ ಬೆಂಕಿ ತಗುಲಿದ್ದು, ಭದ್ರತಾ ಪಡೆಗಲು ತಕ್ಕ ಸಮಯಕ್ಕೆ ಸರಿಯಾಗಿ ಬೆಂಕಿಯನ್ನು ನಂದಿಸಿ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ಸ್ಫೋಟಕಗಳನ್ನು ತುಂಬಿದ ನಾಲ್ಕು ಡ್ರೋನ್‌ಗಳು ಸೌದಿ ಅರೇಬಿಯಾವನ್ನು ಅಪ್ಪಳಿಸಿವೆ.
ಅಬಹಾ ವಿಮಾನ ನಿಲ್ದಾಣವು ಯೆಮನ್‌ನೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಪ್ರಾಂತ್ಯದಲ್ಲಿದೆ. ಸ್ಫೋಟಕಗಳನ್ನು ತುಂಬಿದ ಡ್ರೋನ್‌ಗಳು ಇಲ್ಲಿಗೆ ಬಂದಿಳಿದಿದೆ. ಅವುಗಳಲ್ಲಿ ಒಂದು ಅಪ್ಪಳಿಸಿದಾಗ ಫ್ಲೈ ಆದಿಲ್‌ಗೆ ಬೆಂಕಿ ಕಾಣಿಸಿಕೊಂಡಿದೆ. ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ತಕ್ಷಣವೇ ಬೆಂಕಿಯನ್ನು ನಂದಿಸಿದ್ದಾರೆ. ಬೋರ್ಡಿಂಗ್‌ಗಾಗಿ ಕಾಯುತ್ತಿದ್ದ ವಿಮಾನದಲ್ಲಿ ಯಾತ್ರಿಕರು ಇಲ್ಲದ್ದು ದೊಡ್ಡ ದುರಂತವನ್ನು ತಪ್ಪಿಸಿತು.
ಯೆಮನ್‌ನ ಇರಾನ್ ಬೆಂಬಲಿತ ಬಂಡಾಯ ಗುಂಪು ಹೂತಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಯೆಮನ್‌ನಲ್ಲಿ ಸೌದಿ ನಡೆಸಿದ ದಾಳಿಯ ಪ್ರತೀಕಾರವಾಗಿ ಈ ದಾಳಿ ಎಂದು ಹೂತಿ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಆದರೆ ಸೌದಿ ವಸಾಹತುಗಳ ವಿರುದ್ಧ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಕಳುಹಿಸುವ ಹೂತಿಗಳು ಮತ್ತು ಅವರನ್ನು ಬೆಂಬಲಿಸುವ ಇರಾನ್ ಅನ್ನು ಹದ್ದುಬಸ್ತಿನಲ್ಲಿಡುವಂತೆ ಸೌದಿ ಅರೇಬಿಯಾ ಒತ್ತಾಯಿಸಿದೆ.
2019 ರ ಜೂನ್‌ನಲ್ಲಿ ಇದೇ ವಿಮಾನ ನಿಲ್ದಾಣದಲ್ಲಿ ಹೂತಿ ನಡೆಸಿದ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಭಾರತೀಯರು ಸೇರಿದಂತೆ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಹೊಸ ದಾಳಿಯ ನಂತರ, ವಿವಿಧ ದೇಶಗಳು ಸೌದಿ ಅರೇಬಿಯಾಕೆ ಬೆಂಬಲ ಘೋಷಿಸಿದೆ. ಯೆಮನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಬೆಳಕಿನಲ್ಲಿ ಯುದ್ಧಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಬಿಡೆನ್ ಸರ್ಕಾರ ಘೋಷಿಸಿದೆ. ಹೂತಿಗಳನ್ನು ಭಯೋತ್ಪಾದಕ ಪಟ್ಟಿಯಿಂದ ತೆಗೆದುಹಾಕಲು ಯು.ಎಸ್. ಶ್ರಮಿಸುತ್ತಿದೆ. ಅದೇ ವೇಳೆ, ಗಡಿ ಮತ್ತು ಭದ್ರತೆಯ ದೃಷ್ಟಿಯಿಂದ ಸೌದಿ ಅರೇಬಿಯಾವನ್ನು ಬೆಂಬಲಿಸುವುದಾಗಿ ಯು.ಎಸ್.ಹೇಳಿದೆ.