janadhvani

Kannada Online News Paper

ಕೋವಿಡ್ ಹೆಚ್ಚಳ: 2 ವಾರ ಮಸೀದಿಗಳಲ್ಲಿ ಪ್ರಾರ್ಥನೆ ನಿರ್ಬಂಧ

ಮನಾಮ : ಬಹರೈನ್ ಮಸೀದಿಗಳಲ್ಲಿ ಎರಡು ವಾರಗಳವರೆಗೆ ಪ್ರಾರ್ಥನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ಧಾರವು ಫೆಬ್ರವರಿ 11 ರಿಂದ ಜಾರಿಗೆ ಬರಲಿದೆ. ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ.

ಕಳೆದ ದಿನ, ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಜನರು ನಿಧನ ಹೊಂದಿದ್ದರು. 719 ಮಂದಿಗೆ ಹೊಸತಾಗಿ ಕೋವಿಡ್ ದೃಢಪಡಿಸಲಾಗಿದೆ. ಈ ಪೈಕಿ 323 ಮಂದಿ ವಲಸಿಗರಾಗಿದ್ದಾರೆ. ಪ್ರಸ್ತುತ, 6036 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 46 ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನೂ 461 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com