janadhvani

Kannada Online News Paper

5 ಕೋಟಿಗೆ ಮೋದಿಯವರನ್ನು ಹತ್ಯೆ ಮಾಡುವೆ : ಪೋಸ್ಟ್​ ಮಾಡಿದಾತನ ಬಂಧನ

ಪುದುಚೇರಿ: ಯಾರಾದರೂ ನನಗೆ 5 ಕೋಟಿ ರೂಪಾಯಿ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುತ್ತೇನೆ ಎಂದು ಫೇಸ್​ಬುಕ್​ನಲ್ಲಿ ವ್ಯಕ್ತಿಯೊಬ್ಬ ಪೋಸ್ಟ್​ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಪುದುಚೆರಿಯ ಆರ್ಯಂಕುಪ್ಪಂ ಗ್ರಾಮದ ನಿವಾಸಿಯಾಗಿರುವ ಆರೋಪಿಯನ್ನು 43 ವರ್ಷದ ಸತ್ಯ ಆನಂದಂ ಎಂದು ಗುರುತಿಸಲಾಗಿದೆ. ಫೇಸ್​ಬುಕ್​ನಲ್ಲಿ ಇಂಥದ್ದೊಂದು ಪೋಸ್ಟ್​ ಹಾಕಿದ್ದ. ಕಾರು ಚಾಲಕನೋರ್ನ ಈ ಪೋಸ್ಟ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ.

ಈ ಪೋಸ್ಟ್ ಸಾಕಷ್ಟು ವೈರಲ್​ ಆಗಿತ್ತು. ನಂತರ ಪೊಸ್ಟ್​ ಕುರಿತಂತೆ ದೂರು ಬಂದ ಮೇಲೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಖಾತೆಯ ಮೂಲ ಪರಿಶೀಲಿಸಿದ್ದಾರೆ. ಆತನ ಜಾಡು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಅವನನ್ನು ಬಂಧಿಸಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಈ ಪೋಸ್ಟ್​ ಹಾಕಿರುವ ಉದ್ದೇಶವೇನು? ತಾನು ಪ್ರಸಿದ್ಧಿಗೆ ಬರುವ ಉದ್ದೇಶದಿಂದ ಹೀಗೆ ಮಾಡಿದ್ದಾನಾ ಅಥವಾ ಇದರ ಹಿಂದೆ ಇನ್ನಾವುದಾದರೂ ದುರುದ್ದೇಶವಿದೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸತ್ಯ ಆನಂದಂ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 505 (1) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನಗಳಿಗೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದು ಮತ್ತು ವರ್ಗಗಳ ನಡುವೆ ದ್ವೇಷ, ಅಥವಾ ಕೆಟ್ಟ ಇಚ್ಚೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.