janadhvani

Kannada Online News Paper

ವಿಮಾನ ನಿಷೇಧ ತೆರವು: ಮಾರ್ಚ್ ತನಕ ಕಾಯಬೇಕಾಗಿಲ್ಲ- ಸೌದಿ ಭಾರತೀಯ ರಾಯಭಾರಿ

ರಿಯಾದ್: ಭಾರತದಿಂದ ಸೌದಿ ಅರೇಬಿಯಾಗೆ ತೆರಳುವ ವಿಮಾನಗಳ ನಿಷೇಧವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ.ಔಸಾಫ್ ಸಯೀದ್ ಹೇಳಿದರು.ಈ ಬಗ್ಗೆ ಸೌದಿ ಆರೋಗ್ಯ ಸಚಿವರೊಂದಿಗೆ ನಡೆಸಿದ ಚರ್ಚೆ ಆಶಾದಾಯಕವಾಗಿತ್ತು ಎಂದು ಅವರು ಹೇಳಿದ್ದಾಗಿ ಮಲಯಾಳಂ ನ್ಯೂಸ್ ವರದಿ ಮಾಡಿದೆ.

ವಿಮಾನ ನಿಷೇಧ ತೆರವು, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯರಿಗೆ ಶುಭ ಸುದ್ದಿ ಎಂದು ಅವರು ಹೇಳಿದರು. ಅನೇಕ ಭಾರತೀಯರು ಸೌದಿ ಅರೇಬಿಯಾಕ್ಕೆ ಮರಳಲು ಕಾಯುತ್ತಿದ್ದಾರೆ. ಪ್ರಸ್ತುತ, ಯುಎಇಗೆ ಪ್ರಯಾಣಿಸಿ 14 ದಿನಗಳ ಕಾಲ ಕ್ಯಾರೆಂಟೈನ್‌ನಲ್ಲಿ ಉಳಿದು ಸೌದಿ ಅರೇಬಿಯಾಗೆ ಮರಳುತ್ತಿದ್ದು, ದುಬಾರಿ ವೆಚ್ಚ ಭರಿಸುವಂತಾಗಿದೆ.

ಈ ಹಿಂದೆ ಘೋಷಿಸಿದಂತೆ, ಭಾರತೀಯ ವಿಮಾನಗಳ ನಿಷೇಧವನ್ನು ತೆರವುಗೊಳಿಸಲು ನಾವು ಮಾರ್ಚ್ 31 ರವರೆಗೆ ಕಾಯಬೇಕಾಗಿಲ್ಲ ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com