janadhvani

Kannada Online News Paper

ಅಮಾಯಕರ ಬಂಧನ: ಜ.22 ರಂದು ಬೆಂಗಳೂರು ಬಂದ್- ಮುಸ್ಲಿಂ ಸಂಘಟನೆ ಕರೆ

ನವದೆಹಲಿ,ಜ.17: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಮಾಯಕರನ್ನು ಬೆಂಬಲಿಸಿ ಕರ್ನಾಟಕ ಮುಸ್ಲಿಂ ಮುತ್ತಾಹಿದಾ ಮಹಾಜ್ ಜನವರಿ 22 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಗಲಭೆಯಲ್ಲಿ ಬಂಧಿಸಲ್ಪಟ್ಟ ಮುಗ್ಧ ಯುವಕರನ್ನು ಬಿಡುಗಡೆ ಮಾಡಬೇಕೆಂದು ಮುಸ್ಲಿಂ ಗುಂಪುಗಳು ಒತ್ತಾಯಿಸಿವೆ. ಮುಸ್ಲಿಂ ಗುಂಪುಗಳು ಬಂದ್‌ನಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಲು ಕರೆ ನೀಡಿವೆ ಎಂದು ಟೈಮ್ಸ್ ಮಾಧ್ಯಮ ವರದಿ ಮಾಡಿದೆ.

ಅದೂ ಅಲ್ಲದೇ ,ಲವ್ ಜಿಹಾದ್ ಕಾನೂನು ವಿರುದ್ಧ ಹಾಗೂ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಯಾಗಿ ಈ ಬಂದ್ ಗೆ ಕರೆ ನೀಡಲಾಗಿದೆ ಎಂದುು ಮುಸ್ಲಿಂ ಸಂಘಟನೆಗಳು ಹೇಳಿವೆ.

ಆಗಸ್ಟ್ 2020 ರಲ್ಲಿ, ಬೆಂಗಳೂರಿನಲ್ಲಿ ಗಲಭೆಗಳು ನಡೆದಿದ್ದವು, ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಸೋದರಳಿಯ ನವೀನ್ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಸಂದೇಶವನ್ನು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಈ ಗಲಭೆ ನಡೆದಿದ್ದವು.

ಬೆಳಗ್ಗೆಯಿಂದ ಸಂಜೆ 5 ಗಂಟೆ ವರೆಗೆ ಎಲ್ಲಾ ಮುಸ್ಲಿಂವರು ತಮ್ಮ ಅಂಗಡಿಗಳನ್ನು ಮುಚ್ಚಲಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದುವರೆಗೆ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲೆಭೆ ಬಳಿಕ ಎಸ್‌ಡಿಪಿಐ ಪಕ್ಷದ ನಾಯಕ ಮುಝಮ್ಮಿಲ್ ಪಾಶಾ ಸೇರಿದಂತೆ 421 ಮಂದಿಯನ್ನು ಆರಸ್ಟ್ ಮಾಡಲಾಗಿದೆ.

error: Content is protected !! Not allowed copy content from janadhvani.com