janadhvani

Kannada Online News Paper

ರಿಯಾದ್: ಸೌದಿ ಅರೇಬಿಯಾದ ವಿವಿಧ ದೇಶಗಳ 2,799 ವಲಸಿಗ ಎಂಜಿನಿಯರ್‌ಗಳ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಪ್ರಮಾಣಪತ್ರಗಳು ನಕಲಿ ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಸೌದಿ ಕೌನ್ಸಿಲ್ ಆಫ್ ಇಂಜಿನಿಯರ್ಸ್ ಪ್ರಧಾನ ಕಾರ್ಯದರ್ಶಿ ಫರ್ಹಾನ್ ಅಲ್-ಶಮ್ಮರಿ ಹೇಳಿದರು.

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕಾನೂನು ಬಾಹಿರವಾಗಿ ನುಸುಳಿರುವ ಮತ್ತು ಅಸಮರ್ಥರನ್ನು ಕಂಡುಹಿಡಿಯಲು ಕೌನ್ಸಿಲ್ ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದು ಅಲ್-ಶಮ್ಮರಿ ಹೇಳಿದರು.

ಹೆಚ್ಚಿನ ಅರ್ಹತೆಗಳು, ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಉದ್ಯೋಗಗಳಿಗೆ ಅಗತ್ಯವಾದ ಅರ್ಹತೆಗಳನ್ನು ಹೊಂದಿರದವರನ್ನು ನಿರ್ಮೂಲನೆ ಮಾಡುವ ಕಾರ್ಯಕ್ರಮದ ಭಾಗವಾಗಿ ಅರ್ಹತೆ ಇಲ್ಲದವರನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ.ವಿವಿಧ ಯೋಜನೆಗಳಿಗೆ ಕೆಲಸ ಮಾಡುವ ಅನರ್ಹ ತಂತ್ರಜ್ಞರು ಮತ್ತು ಎಂಜಿನಿಯರ್‌ಗಳು ಭದ್ರತೆಗೆ ಸವಾಲಾಗಿದ್ದು, ಭಾರೀ ಅಪಾಯಕ್ಕೆ ಹೇತುವಾಗಿದ್ದಾರೆ.

ಅರ್ಹ ವಿದೇಶಿ ಎಂಜಿನಿಯರ್‌ಗಳನ್ನು ಹುಡುಕಲು ವೃತ್ತಿಪರ ಪರೀಕ್ಷೆಗಳನ್ನು ನಡೆಸಬೇಕೆಂದು ಆಕ್ಟಿಂಗ್ ಮುನ್ಸಿಪಲ್ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವ ಮಜೀದ್ ಅಲ್ ಹೊಕೈಲಿ ಇತ್ತೀಚೆಗೆ ನಿರ್ದೇಶನ ನೀಡಿದರು.

error: Content is protected !! Not allowed copy content from janadhvani.com