ಎಸ್.ಎಸ್.ಎಫ್ ಮುದುಂಗಾರು ಕಟ್ಟೆ ಶಾಖೆಯ ವಾರ್ಷಿಕ ಮಹಾ ಸಭೆಯು ಡಿ.17 ರಂದು ಶಾಖೆಯ ಅದ್ಯಕ್ಷರಾದ ಸಿದ್ದೀಕ್ ಅಹ್ಸನಿ ಉಸ್ತಾದ್ ರವರ ಅದ್ಯಕ್ಷತೆಯಲ್ಲಿ ಹಿದಾಯತುಲ್ ಇಸ್ಲಾಂ ಮದ್ರಸ ಮುದುಂಗಾರು ಕಟ್ಟೆಯಲ್ಲಿ ನಡೆಯುತು.
ಮುದುಂಗಾರು ಕಟ್ಟೆ ಜುಮಾ ಮಸ್ಜಿದ್ ಖತೀಬರಾದ ಬಹುಮಾನ್ಯ ಹೈದರ್ ಅಲಿ ಹಿಮಮಿ ಉಸ್ತಾದರು ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ಎಸ್.ಎಸ್.ಎಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಜಮಾಲುದ್ದೀನ್ ಸಖಾಫಿ ಉಸ್ತಾದರು ಸ್ವಾಗತಿಸಿದರು.ಶಾಖಾ ವೀಕ್ಷಕರಾಗಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಇರಾ ಸೈಟ್, ರಫೀಕ್ ಬಿ.ಎನ್ ಭಾಗವಹಿಸಿದ್ದರು.
ಕಾರ್ಯದರ್ಶಿ ಅನ್ಸಾರ್ 2020ನೇ ಸಾಲಿನ ವರದಿ ಮತ್ತು ಲೆಕ್ಕ ಪತ್ರ ಮ೦ಡಿಸಿದರು.
ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷರಾದ ಬಹುಮಾನ್ಯ ಇಬ್ರಾಹಿಂ ಅಹ್ಸನಿ ಉಸ್ತಾದರು ಸಂಘಟನೆಯ ಆದರ್ಶಗಳ ಬಗ್ಗೆ ವಿವರಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ರವರ ನಿರ್ದೆಶನದಂತೆ ನೂತನ ಪಧಾದಿಕಾರಿಗಳ ನೇಮಕ ಮಾಡಲಾಯಿತು.
ನೂತನ ಪಧಾದಿಕಾರಿಗಳ ವಿವರ
ಅದ್ಯಕ್ಷರು:-ನಾಸಿರ್ ಸಅದಿ
ಪ್ರಧಾನಕಾರ್ಯದರ್ಶಿ:-ಮುಹಮ್ಮದ್ ರಾಶಿದ್
ಕೋಶಾಧಿಕಾರಿ:-ಖಲಂದರ್
ಉಪಾದ್ಯಕ್ಷರು:-ಅಬ್ದುಲ್ ಅಝೀಝ್ ಎಂ.ಎಂ,
ನೌಫಲ್
ಕಾರ್ಯದರ್ಶಿಗಳು :-ಖಲೀಲ್ ಸಿ . ಎಚ್, ಶಫೀಕ್ ಮಜಲ್, ರುಮೈಝ್, ಇರ್ಷಾದ್, ಜಬ್ಬಾರ್, ಸಫ್ವಾನ್ ಸಿ . ಎಚ್ ಇವರನ್ನು ಆರಿಸಲಾಯಿತು.
ಸಭೆಯಲ್ಲಿ ಎಸ್ಸೆಸ್ಸೆಫ್ ಬಾಳೆಪುಣಿ ಸೆಕ್ಟರ್ ಸದಸ್ಯರಾದ ಉಸ್ಮಾನ್ ಸಹರ, ಉಸ್ತಾದ್ ಜುನೈದ್ ಮರ್ಝೂಕಿ, ರಫೀಕ್ ಸಿ.ಎಚ್, ಉಸ್ತಾದ್ ತ್ವಯ್ಯಿಬ್ ಸಖಾಫಿ ಉಪಸ್ಥಿತರಿದ್ದರು.
ನೂತನ ಕಾರ್ಯದರ್ಶಿ ಮುಹಮ್ಮದ್ ರಾಶಿದ್ ಧನ್ಯವಾದ ಗೈದರು.