janadhvani

Kannada Online News Paper

ಇನ್ಮುಂದೆ ಎಲ್ಲಾ ಮಸೀದಿಗಳಲ್ಲಿ ದೇಶೀಯ ಇಮಾಮರ ನೇಮಕ

ರಿಯಾದ್: ಮಸೀದಿಗಳಲ್ಲಿ ಸಂಪೂರ್ಣ ಸ್ಥಳೀಯ ಇಮಾಮ್‌ಗಳನ್ನು ನೇಮಿಸಲು ಸೌದಿ ಅರೇಬಿಯಾ ತಯಾರಿ ನಡೆಸುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿನ ಮಸೀದಿಗಳಲ್ಲೂ ಇದೇ ನಿಯಮವನ್ನು ಜಾರಿಗೊಳಿಸಲಾಗುವುದು.ಈ ಕ್ರಮವು ಮಸೀದಿಯಲ್ಲಿನ ಉಪನ್ಯಾಸ ಮತ್ತು ನೋಟಿಸ್ ವಿತರಣೆಯನ್ನು ನಿಯಂತ್ರಿಸಿ ಭದ್ರತೆಯನ್ನು ಕಾಪಾಡುವ ಭಾಗವಾಗಿದೆ.

ಸೌದಿಯ ವಿವಿಧ ಭಾಗಗಳಲ್ಲಿನ ಹೆಚ್ಚಿನ ಮಸೀದಿಗಳಲ್ಲಿ ಸ್ಥಳೀಯ ಇಮಾಮರಿದ್ದಾರೆ. ಆದರೆ ಕೆಲವು ಶಾಪಿಂಗ್ ಮಾಲ್‌ಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಮಸೀದಿಗಳಲ್ಲಿ ಇಮಾಮ್‌ಗಳಾಗಿ ವಿದೇಶಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಭದ್ರತೆಯ ಉದ್ದೇಶದಿಂದ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಮತ್ತು ಪುರಸಭೆಗಳ ಸಚಿವಾಲಯವು ಯೋಜನೆಯನ್ನು ಸಿದ್ಧಪಡಿಸುತ್ತದೆ.

ಪ್ರಸ್ತುತ , ಪ್ರತಿ ಶುಕ್ರವಾರ ಮಸೀದಿಗಳಲ್ಲಿ ನಡೆಯುವ ಖುತುಬಗಳ ವಿಷಯವನ್ನು ಏಕೀಕರಿಸಲಾಗಿತ್ತು. ಇಮಾಮ್‌ಗಳು ಈ ವಿಷಯಗಳ ಬಗ್ಗೆ ಮಾತ್ರ ಬೋಧನೆ ನೀಡಬೇಕು. ಇದರ ಮೇಲ್ವಿಚಾರಣೆಗಾಗಿ ರೆಕಾರ್ಡಿಂಗ್ ವ್ಯವಸ್ಥೆಯೂ ಇದೆ. ಉಗ್ರ ಸ್ವರೂಪದ ಪ್ರವಚನ ಸಂಭವಿಸದಂತೆ ತಡೆಯಲು ಇಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಪವಿತ್ರ ಖುರ್ಆನ್ ಹೊರತುಪಡಿಸಿ ಇತರ ಕೃತಿಗಳನ್ನು ದೇಶಾದ್ಯಂತ ಮಸೀದಿಗಳಲ್ಲಿ ಇಡುವುದನ್ನು ನಿಯಂತ್ರಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ಭಾಗವಾಗಿ, ಶುಕ್ರವಾರದ ಖುತುಬ ನಂತರದ ವಿವಿಧ ಉಪನ್ಯಾಸ ಮತ್ತು ನೋಟಿಸ್ ವಿತರಣೆಯನ್ನು ನಿಯಂತ್ರಿಸಲಾಗಿದೆ.

error: Content is protected !! Not allowed copy content from janadhvani.com