ಮೈಸೂರು: ಮುಂದಿನ ನಾಲ್ಕೈದು ವಾರದೊಳಗಾಗಿ ಕೊರೊನಾಗೆ ಲಸಿಕೆ ಬರಬಹುದು. ಹೀಗಾಗಿ, ಜಿಲ್ಲಾಮಟ್ಟದಲ್ಲಿ ಲಸಿಕೆ ಹಂಚಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಎರಡು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾಗೆ ಲಸಿಕೆ ಹಂಚಲು ಸಿದ್ಧತೆ ಮಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಮಂಗಳವಾರ ಹಲವು ರಾಜ್ಯಗಳ ಸಿಎಂ ಸಭೆ ಕರೆದಿದ್ದರು. ಇದರಲ್ಲಿ ಕೊರೊನಾ ಲಸಿಕೆ ವಿಚಾರವಾಗಿಯೇ ತಿಳಿಸಿದ್ದಾರೆ ಎಂದರು.
ಸಭೆಯಲ್ಲಿ ಪ್ರಧಾನಿ ಕೊರೊನಾ ಲಸಿಕೆ ನಾಲ್ಕು ವಾರದೊಳಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆಯ ಹಂಚಿಕೆ ವಿಚಾರವಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ನಾವು ಸಹ ಜಿಲ್ಲಾಮಟ್ಟದಲ್ಲಿ ಲಸಿಕೆ ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೇ ಬೇಕಾದ ತಯಾರಿ ನಡೆದಿದೆ ಎಂದು ತಿಳಿಸಿದರು.
ನಗರದ ನಜರ್‌ಬಾದ್‌ನ ಕುಪ್ಪಣ್ಣ ಉದ್ಯಾನ ಮತ್ತು ಮಕ್ಕಳ ಉದ್ಯಾನದ ನಡುವೆ ನಿರ್ಮಾಣವಾಗಿರುವ ಮೈಸೂರಿನ ನಗರ ಪೊಲೀಸ್ ಆಯುಕ್ತರ ನೂತನ ಕಚೇರಿ ಹಾಗೂ ಪೊಲೀಸ್ ವಸತಿ ಗೃಹಗಳನ್ನು ಮಂಗಳವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸುರತ್ಕಲ್: ಸೋಶಿಯಲ್ ಮೀಡಿಯಾ ಮೂಲಕ ಹನಿಟ್ರ್ಯಾಪ್- ನಾಲ್ವರ ಬಂಧನ
ಯುಪಿ:ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ಬಂಧಿತ ಬಿಜೆಪಿ ನಾಯಕನಿಗೆ ಹಲವು ಕ್ರಿಮಿನಲ್ ಹಿನ್ನೆಲೆ
ಸೌದಿ: ಒಂದೇ ವಾರದಲ್ಲಿ 20 ಸಾವಿರ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ
ಇಸ್ರೇಲ್- ಯುಎಇ ವೀಸಾ ರಹಿತ ಪ್ರಯಾಣ ಒಪ್ಪಂದ ರದ್ದು
ವಾಟ್ಸಾಪ್ ಹೊಸ ಫೀಚರ್- ಅನಗತ್ಯ ಮೆಸೇಜ್ ತಾನಾಗಿಯೇ ಡಿಲೀಟ್