janadhvani

Kannada Online News Paper

ರಾಯಚೂರು : ಎಸ್ಸೆಸ್ಸೆಫ್ ಜಿಲ್ಲಾ ಸಮಿತಿಗೆ ನೂತನ ಸಾರಥ್ಯ

ಸಿಂಧನೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಯಚೂರು ಜಿಲ್ಲಾ ಸಮಿತಿ ರಚನೆಯು ಸಿಂಧನೂರು ತಾಲೂಕಿನ ಗೋಪಾಲ ನಗರದಲ್ಲಿ ನಡೆಯಿತು.
ಎಸ್ಸೆಸ್ಸೆಫ್ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮುಬಶ್ಶಿರ್ ಅಹ್ಸನಿ ಕೊಡಗು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ಡೆಪ್ಯುಟಿ ಅಧ್ಯಕ್ಷ ಮೌಲಾನಾ ಗುಲಾಂ ಹುಸೈನ್ ನೂರಿ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಹಾಗೂ ರಾಜ್ಯ ಕಾರ್ಯದರ್ಶಿ ಮುಸ್ತಫಾ ನಈಮಿ ಹಾವೇರಿ ಮಾತನಾಡಿದರು‌.

ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಮೌಲಾನಾ ವಲಿ ಭಾಷಾ ಸಿಂಧನೂರು, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ರಝಾ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಜಲೀಲ್ ಅರಕೇರಾ ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ, ಕೋಶಾಧಿಕಾರಿ ರವೂಫ್ ಖಾನ್ ರಾಜ್ಯ ಸದಸ್ಯರಾದ ಮುಬಶ್ಶಿರ್ ಅಹ್ಸನಿ, ಎಕೆ ರಝಾ ಅಮ್ಜದಿ, ಶರೀಫ್ ಕೊಡಗು, ಸಫ್ವಾನ್ ಚಿಕ್ಕಮಗಳೂರು, ಮುನೀರ್ ಮದನಿ ಮೈಸೂರು, ರಫೀಕ್ ಕೊಡಗು ಉಪಸ್ಥಿತರಿದ್ದರು.