ಸಕಲೇಶಪುರ,ನ.22: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಇಶ್ಕೇ ಮದೀನ ಮಸ್ಕಾನ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಹಾಸನ ರಕ್ತನಿಧಿ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 22 ನವಂಬರ್ 2020 ನೇ ಆದಿತ್ಯವಾರದಂದು ಸಕಲೇಶಪುರ ಪುರಭವನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಜನಾಬ್:ನೌಶಾದ್ ಹಾಜಿ ಸುರಲ್ಪಾಡಿ(ಅಧ್ಯಕ್ಷರು ನಂಡೆ ಪೆಂಙಳ್) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಜನಾಬ್:ಝಾಕಿರ್ ಯಾದಗೀರ್(ಅಧ್ಯಕ್ಷರು ಬದ್ರಿಯಾ ಜುಮಾ ಮಸೀದಿ,ಸಕಲೇಶಪುರ) ಉಧ್ಘಾಟಿಸಿದರು.
ಬಹು: ಅಶ್ರಫ್ ಸಖಾಫಿ(ಅಧ್ಯಕ್ಷರು ಇಶ್ಕೇ ಮದೀನ ಮಶ್ಕಾನ್ ಅಕಾಡೆಮಿ) ದುಃವಾಶೀರ್ವಚನ ನೀಡಿ ಬಹು:ಮುನೀರ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು.
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 31 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಹಾಸನ ರಕ್ತನಿಧಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮದಲ್ಲಿ 15 ಮಕ್ಕಳು ಪಾಲ್ಗೊಂಡು ಸದುಪಯೋಗ ಪಡಿಸಿಕೊಂಡರು. ಡಾ! ಸಿದ್ದೀಕ್ ಅಡ್ಡೂರು(ರಿಫಾ ಪಾಲಿ ಕ್ಲಿನಿಕ್ ಅಡ್ಡೂರು) ಮುಂಜಿ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಪೋಕರ್ ಆನೆಮಹಲ್,ಆಸೀಫ್ ಆದರ್ಶ್,ಆದಂ ಹಾಜಿ,ಅಕ್ಬರ್,ಡಾ! ಕಾಂತರಾಜ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.ಬಹು:ಹಮೀದ್ ದಾರಿಮಿ ಸ್ವಾಗತಿಸಿ ಅಶ್ರಫ್ ಕಲ್ಲಡ್ಕ ಕಾರ್ಯಕ್ರಮನ್ನು ನಿರೂಪಿಸಿದರು.
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಕಲೇಶಪುರದ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಷನ್: ವಾರ್ಷಿಕ ಮಹಾಸಭೆ- ನೂತನ ಸಮಿತಿ ಅಸ್ತಿತ್ವಕ್ಕೆ
ಅಲ್-ಮದೀನತುಲ್ ಮುನವ್ವರ ಮೂಡಡ್ಕ: ಅಲ್ ಬಾದಿಯಾ ಮಹಾಸಭೆ
ಅಲ್-ಮದೀನತುಲ್ ಮುನವ್ವರ: ಮುಬಾರಕಿಯ್ಯಾ ಮಹಾಸಭೆ
ವಿದ್ಯಾರ್ಥಿ ವೇತನ ಸಮಸ್ಯೆ : ಬ್ಯಾರಿ ಮಹಾಸಭಾ ವೇದಿಕೆಯಿಂದ ಅಲ್ಪಸಂಖ್ಯಾತ ಅಧ್ಯಕ್ಷರ ಭೇಟಿ
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಇಹ್ಸಾನ್ ಸೆಂಟರ್, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಜನವರಿ 17ಕ್ಕೆ