ಜೀಲಾನಿ ಅನುಸ್ಮರಣೆ ಹಾಗೂ ಗಲ್ಫ್ ಕಮಿಟಿ ಉಳ್ತೂರ್ ಇದರ ವಾರ್ಷಿಕ ಮಹಾ ಸಭೆ, ನಾಲ್ಕನೇ ವರ್ಷವೂ ಕಾರ್ಯದರ್ಶಿಯಾಗಿ ಬಾಹಸನಿ ಅವಿರೋಧ ಆಯ್ಕೆ
ಅಲ್ಲಾಹನ ಅಪಾರ ಅನುಗ್ರಹದಿಂದ ನಾಲ್ಕು ವರ್ಷಗಳ ಮುಂಚೆ ಜನ್ಮ ತಾಳಿದ ಗಲ್ಫ್ ಕಮಿಟಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 21 ನವೆಂಬರ್ 2020 ರಂದು ಸಮಯ 8ಕ್ಕೆ ಸರಿಯಾಗಿ ಆನ್ಲೈನ್ ವಾಟ್ಸಪ್ ಗ್ರೂಪ್ ಮೂಲಕ ಬಹಳ ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಾಯಿತು. ಕಳೆದ ವರ್ಷ ಸುಮಾರು 87000 ರೂಪಾಯಿಗಳ (ಕಿಟ್ಟ್, ಮದುವೆ ಸಹಾಯ ಹಾಗೂ ಮಸೀದಿ ಸಹಾಯಕ್ಕಾಗಿ) ನಮ್ಮಿಂದ ಸ್ವದಖಾ ನೀಡಲು ಸಾಧ್ಯವಾಯಿತು ಅಲ್ ಹಂದುಲಿಲ್ಲಾ. ನಾಲ್ಕು ವರ್ಷಗಳಿಂದ ಬೆರಳೆಣಿಕೆಯ ಸದಸ್ಯರಿಂದ ಸಂಗ್ರಹಿಸಿದ ಮೊತ್ತದಿಂದ ಹಲವಾರು ಜೀವಕಾರುಣ್ಯದ ಕೆಲಸಗಳನ್ನು ಮಾಡಿ ಊರಿನ ಅಭಿವೃದ್ಧಿಗೆ ಹಾಗೂ ಲಾಕ್ ಡೌನ್ ಸಮಯದಲ್ಲಿ ಜಾತಿ ಭೇದವಿಲ್ಲದೆ ಕಿಟ್ಟ್ ವಿತರಿಸಿ ಮತ್ತು ಇತರ ಕೆಲಸ ಕಾರ್ಯಗಳನ್ನು ಮಾಡುತ್ತಾ ಊರಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಮಾಶಾಅಲ್ಲಾಹ್.
2020-2021 ರ ನೂತನ ಸಾರಥಿಗಳು
ಗೌರವಾಧ್ಯಕ್ಷರಾಗಿ,
ಝಿಯಾವುದ್ದೀನ್ ಝೈನಿ ಉಸ್ತಾದ್ ಉಳ್ತೂರ್
ಅಧ್ಯಕ್ಷರಾಗಿ
ಅಬ್ದುಲ್ ಬಶೀರ್ ಗೋಳಿಯಂಗಡಿ
ಪ್ರಧಾನ ಕಾರ್ಯದರ್ಶಿಯಾಗಿ
ಜಲಾಲುದ್ದೀನ್ ಬಾಹಸನಿ ಉಳ್ತೂರ್
ಕೋಶಾಧಿಕಾರಿಯಾಗಿ
ಬದ್ರುದ್ದೀನ್ ಪುಲ್ಲಾಯ
ಸದಸ್ಯರುಗಳಾಗಿ,
ಅಶ್ರಫ್ ಮಸೀದಿ ಬಳಿ ಉಳ್ತೂರ್ (ಸಲಹೆಗರಾರು)
ಅಬ್ಬಾಸ್ ಗೋಳಿಯಂಗಡಿ
ಶಬೀರ್ ಬರಮೇಲು
ಹಾಶೀರ್ ತಂಙಳ್ ಉಳ್ತೂರ್
ಮುಖ್ತಾರ್ ತಂಙಳ್ ಉಳ್ತೂರ್
ಇರ್ಶಾದ್ ಪುಲ್ಲಾಯ
ಇರ್ಫಾನ್ ಬರಮೇಲು
ನವಾಝ್ ಉಳ್ತೂರ್
ಹಾರೀಸ್ ದಂಡ್ಯೋಟ್
ಅಶ್ರಫ್ ಉಳ್ತೂರ್
ಇಕ್ಬಾಲ್ ಉಳ್ತೂರ್
ಶಂಶುದ್ದೀನ್ ಉಳ್ತೂರ್
ಇವರನ್ನು ಆಯ್ಕೆಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಝೈನಿ ಉಸ್ತಾದ್ ಉಳ್ತೂರ್ ವಹಿಸಿ ಸ್ವಾಗತ ಹಾಗೂ ದುಆ ಮತ್ತು ಮುಹ್ಯುದ್ದೀನ್ ಶೈಖ್ ಜೀಲಾನಿ ರಳಿಯಲ್ಲಾಹು ಅನ್ಹು ರ ಅನುಸ್ಮರಣೆಯನ್ನು ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರು ನೆರವೇರಿಸಿ ನೂತನ ಕಾರ್ಯದರ್ಶಿಯ ಧನ್ಯವಾದೊಂದಿಗೆ ಹಬೀಬ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ರ ಮೇಲೆ ಮೂರು ಸ್ವಲಾತ್ ಹೇಳಿ ಮುಕ್ತಾಯಗೊಳಿಸಲಾಯಿತು