janadhvani

Kannada Online News Paper

ತಾಜುಸ್ಸುನ್ನ ಎಜುಕೇಶನಲ್ ಟ್ರಸ್ಟ್ ಭಟ್ಕಳ ದಲ್ಲಿ ತಾಜುಲ್ ಉಲಮಾ ಖ. ಸಿ ರವರ 7 ನೇ ವರ್ಷದ ದುಆ ಸಂಗಮ

ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಸಮುಚ್ಚಯವಾದ ತಾಜುಸ್ಸುನ್ನ ಭಟ್ಕಳ ದಲ್ಲಿ ತಾಜುಲ್ ಉಲಮಾರವರ 7ನೇ ವರ್ಷದ ಆಂಡ್ ನೆರ್ಚೆಯು ದಿನಾಂಕ 19.11.2020 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಖಾಝೀ ಮುನಾಝಿರೇ ಅಹ್ಲೆ ಸುನ್ನತ್, ಶಾಗಿರ್ದೆ ಆಲಾ ಹಝ್ರತ್,ಮೌಲಾನಾ,ಮುಫ್ತಿ, ಖಾಝಿ ಮುಹಮ್ಮದ್ ಇಸ್ಮಾಯಿಲ್ ಮಖ್ಬೂಲೀ ಹಾನಗಲ್ ರವರ ನೇತ್ರತ್ವ ದಲ್ಲಿ ನಡೆಯಿತು.

ಸಮಾರಂಭವನ್ನು ಡಾ|ಮುಹಮ್ಮದ್ ಫಾಝಿಲ್ ರಝ್ವೀ ಕಾವಲ್ಕಟ್ಟೆ ಹಝ್ರತ್ ರವರು ಉದ್ಘಾಟಿಸಿದರು.ಮೌಲಾನ ಮುಫ್ತಿ ಖಾಝೀ ಮುಹಮ್ಮದ್ ಇಬ್ರಾಹಿಂ ಮಖ್ಬೂಲೀ ರತ್ನಗಿರಿ ರವರು ಮುಖ್ಯ ಪ್ರಭಾಷಣ ಮಾಡಿದರು.

ತಾಜುಸ್ಸುನ್ನ ಅಧ್ಯಕ್ಷ ಅಸ್ಸೆಯ್ಯಿದ್ ಅಲವಿ ತಂಙಳ್ ಕರ್ಕಿ ರವರ ನೇತ್ರತ್ವ ದಲ್ಲಿ ಜಲಾಲಿಯಾ ರಾತಿಬ್ ನಡೆಯಿತು. ಸಂಸ್ಥೆಯ ಮೇನೇಜರ್ ಆರೀಫ್ ಸಹದಿ ಕಾಟಿಪಳ್ಳ ಶೈಖ್ ಜೀಲಾನಿ ಖ. ಸಿ ರವರ ಮದ್ಹ್ ಆಲಾಪಿಸಿದರು. ತಾಜುಸ್ಸುನ್ನ ಕಾರ್ಯದರ್ಶಿ ಅಬ್ದುಲ್ ರಝ್ಝಾಕ್ ಅಹ್ಸನಿ ಪರಫ್ಫು ಸ್ವಾಗತಸಿದರು.

ತಾಜುಸ್ಸುನ್ನ ಸೌದಿ ಅರೇಬಿಯಾದ ಆರ್ಗನೈಝರ್ ಮುಹಮ್ಮದ್ ಅನಸ್ ಸಅದಿ ಬೆದ್ರೋಡಿ. SSF ರಾಜ್ಯ ಸಮೀತಿಯ ಸದಸ್ಯರಾದ A K ರಝಾ ಅಮ್ಜದಿ ಹೊನ್ನಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ತಾಜುಸ್ಸುನ್ನ ಸದರ್ ಮುಅಲ್ಲಿಮ್ ಅಬೂಬಕರ್ ಸಖಾಫಿ ಮುದುಂಗಾರುಕಟ್ಟೆ. ತಾಜುಸ್ಸುನ್ನ ಇಮಾಮ್ ಮೌಲಾನ ಮಿಹ್ರಾಜ್ ಸಹದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಜುಸ್ಸುನ್ನ ಭಟ್ಕಳ ಸೌದಿ ಅರೇಬಿಯಾದ ಆರ್ಗನೈಝರ್ ಮುಹಮ್ಮದ್ ಅನಸ್ ಸಹದಿ ಬೆದ್ರೋಡಿ. ಹಾಗೂ ಕರ್ನಾಟಕ ಮುಸ್ಲಿಂ ಜಮಾಆತ್ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ನವಾಜ್ ಭಟ್ಕಳ ರವರನ್ನು ಸನ್ಮಾನಿಸಿಲಾಯಿತು. ಖಾಝೀ ಹಝರತ್ ಇಸ್ಮಾಯಿಲ್ ಮಖ್ಬೂಲೀ ಹಾನಗಲ್ ರವರಿಗೆ “ಫಖ್ರೇ ಜೂನೂಬುಲ್ ಹಿಂದ್” ಎಂಬ ಬಿರುದು ನೀಡಿ ಗೌರವಿಸಲಾಯಿತು. ಕಾರ್ಯಾಕ್ರಮವನ್ನು ಮೌಲಾನ ಪೈಝಾನ್ ರಝಾ ನಿರೂಪಿಸಿ ವಂದಿಸಿದರು.

error: Content is protected !! Not allowed copy content from janadhvani.com