ರಿಯಾದ್: ಅಲ್ಪಾವಧಿಯ ಭೇಟಿ ವೀಸಾಗಳನ್ನು ನೀಡಲು ಸೌದಿ ಅರೇಬಿಯಾ ಸಿದ್ಧತೆ ನಡೆಸಿದೆ. ನೆಲ, ಜಲ ಮತ್ತು ವಾಯು ಮಾರ್ಗ ಮೂಲಕ ದೇಶಕ್ಕೆ ಆಗಮಿಸುವ ಪ್ರಯಾಣಿಕರಿಗೆ ತಾತ್ಕಾಲಿಕ ಟ್ರಾನ್ಸಿಟ್ ವೀಸಾಗಳನ್ನು ನೀಡಲಾಗುವುದು. ನಲವತ್ತೆಂಟರಿಂದ ತೊಂಬತ್ತಾರು ಗಂಟೆಗಳವರೆಗಿನ ಅವಧಿಯ ವೀಸಾಗಳನ್ನು ನೀಡಲಾಗುತ್ತದೆ.
ಸಂದರ್ಶಕ ಮತ್ತು ತೀರ್ಥ ಯಾತ್ರೆ ವೀಸಾಗಳ ರಚನೆಯಲ್ಲಿ ಬದಲಾವಣೆ ತಂದು ಹೊಸ ಆದೇಶ ಹೊರಡಿಸಲಾಗಿದ್ದು,ದೇಶಕ್ಕೆ ಪ್ರವೇಶಿಸುವ ವಿದೇಶಿಯರಿಗೆ ತಾತ್ಕಾಲಿಕ ಟ್ರಾನ್ಸಿಟ್ ವೀಸಾಗಳನ್ನು ನೀಡುವುದಾಗಿದೆ ಹೊಸ ನಿರ್ಧಾರ. ನೆಲ, ಸಮುದ್ರ ಅಥವಾ ವಾಯುಮಾರ್ಗ ಮೂಲಕ ಬರುವ ಎಲ್ಲಾ ವಿದೇಶಿಯರು ವೀಸಾಕ್ಕೆ ಅರ್ಜಿ ಸಲ್ಲಿಸಬಹುದು.
ವೀಸಾಗಳು 48 ರಿಂದ 96 ಗಂಟೆಗಳವರೆಗೆ ಮಾನ್ಯವಾಗಿರುತ್ತವೆ. 48 ಗಂಟೆಗಳ ವೀಸಾದ ಶುಲ್ಕ 100 ರಿಯಾಲ್ ಮತ್ತು 96-ಗಂಟೆಗಳ ವೀಸಾಕ್ಕೆ 300 ರಿಯಾಲ್ ಶುಲ್ಕ ನಿಗದಿಪಡಿಸಲಾಗಿದೆ.ವಿಸಾ ಆನ್ ಅರೈವಲ್ ಲಭ್ಯವಾಗಲಿದೆ. ಆದರೆ ಈ ಯೋಜನೆಯಿಂದ ಎಲ್ಲಾ ರಾಷ್ಟ್ರೀಯತೆಗಳು ಪ್ರಯೋಜನ ಪಡೆಯುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಹೊಸ ನಿರ್ಧಾರವು ಯಾತ್ರಾರ್ಥಿಗಳು ಮತ್ತು ದೇಶಕ್ಕೆ ಭೇಟಿ ನೀಡುವವರ ಹರಿವನ್ನು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ.