ಮನಾಮ : ಕೆ.ಸಿ.ಎಫ್ ಬಹರೈನ್ ಗ್ರಾಂಡ್ ಮೀಲಾದ್ ಕಾನ್ಫೆರನ್ಸ್ -2020 ಓನ್ ಲೈನ್ ಕಾರ್ಯಕ್ರಮವು ವಿಟ್ಟಲ್ ಜಮಾಲುದ್ದೀನ್ ರವರ ಅಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.ಕೆ.ಸಿ.ಎಫ್ ಐಎನ್ಸಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜನಾಬ್ ಅಲಿ ಮುಸ್ಲಿಯಾರ್ ರವರ ದುವಾ ಮೂಲಕ ಕಾರ್ಯಕ್ರಮವು ಚಾಲನೆಗೊಂಡಿತು. ಹಾಫಿಝ್ ದರ್ವೇಶ್ ಮುಹಮ್ಮದ್ ಅಲಿಯವರು ಖಿರಾಅತ್ ಪಠಿಸಿದರು. ಸ್ವಾಗತ ಭಾಷಣ ಮಾಡಿದ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಮೀಲಾದ್ ಅಭಿಯಾನದ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.ಐ.ಸಿ.ಎಫ್ ಬಹರೈನ್ ಆಧ್ಯಕ್ಷರಾದ ಝೈನುದ್ದೀನ್ ಸಖಾಫಿ ಉಸ್ತಾದರು ಉದ್ಘಾಟನೆಯನ್ನು ಮಾಡುತ್ತಾ ಪ್ರವಾದಿ ಪ್ರೇಮ ಸತ್ಯ ವಿಶ್ವಾಸದ ಅವಿಭಾಜ್ಯ ಅಂಗ ಎಂದು ಸಾರಿದರು. ಆದ್ಯಕ್ಷೀಯ ಭಾಷಣವನ್ನು ಮಾಡಿದ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ರವರು ಕೆ.ಸಿ.ಎಫ್ ಕಾರ್ಯಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.ಮುಖ್ಯ ಪ್ರಭಾಷಣವನ್ನು ಮಾಡಿದ ಯುವ ವಾಗ್ಮಿ, ಝಿಕ್ರಾ ಥಿಯೋಲಜಿಕಲ್ ಅಕಾಡಮಿ ಚೇರ್ಮ್ಯಾನ್ ಬಹು ನೌಫಲ್ ಸಖಾಫಿ ಕಳಸ ಉಸ್ತಾದರು, ಪ್ರವಾದಿ (ﷺ) ರವರ ಮಾದರಿ ಜೀವನದಿಂದ ಪಾಠ ಕಲಿತು ನಮ್ಮ ಬದುಕನ್ನು ಧನ್ಯಗೊಳಿಸಬೇಕಾಗಿದೆ ಎಂದು ನುಡಿದರು. ಅಡ್ಯಾರ್ ಕಣ್ಣೂರಿನಲ್ಲಿ ತಲೆ ಎತ್ತುತ್ತಿರುವ ಮರ್ಕಝುಲ್ ಇಸ್ಲಾಮ್ ಸ್ಥಾಪನೆಗೆ ಸರ್ವ ರೀತಿಯ ಸಹಾಯವನ್ನು ನಾವೆಲ್ಲರೂ ಮಾಡ ಬೇಕಾಗಿದೆ ಎಂದು ಕರೆಯಿತ್ತರು.ಕಾರ್ಯಕ್ರಮದ ಕೇಂದ್ರ ಬಿಂದು, ವಿಶ್ವ ವಿಖ್ಯಾತ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯಃ ಇದರ ಅಧ್ಯ ಕ್ಷರೂ, ಸಮಸ್ತ ಕೇರಳ ಜಂಇ ಯ್ಯತುಲ್ ಉಲಮಾ ಉಪಾಧ್ಯಕ್ಷ ರಾದ ಅಸ್ಸಯ್ಯಿದ್ ಅಲೀ ಭಾಫಖಿ ತಂಗಳ್ರವರು ದುವಾಶೀರ್ವಚನ ನಡೆಸಿದರು.
ಕೆ.ಸಿ.ಎಫ್ ಐಎನ್ಸಿ ಅಧ್ಯಕ್ಷರಾದ ಡಾ ! ಶೈಖ್ ಬಾವ,ಪ್ರಧಾನ ಕಾರ್ಯ ದರ್ಶಿ ಖಮರುದ್ದೀನ್ ಗೂಡಿನಬಳಿ,ಬಹರೈನ್ ಐ.ಸಿ.ಎಫ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಕರೀಂ,ಕೆ.ಸಿ.ಎಫ್ ಬಹರೈನ್ ಐಎನ್ಸಿ ಪ್ರತಿನಿಧಿ ಬಶೀರ್ ಕಾರ್ಲೆ, ಉರ್ದು ವಿಂಗ್ ಚೇರ್ಮ್ಯಾನ್ ಗಯಾಝುದ್ದೀನ್ ಮೈಸೂರು ಕಾರ್ಯಕ್ರಮಕ್ಕೆ ಶುಭ ಕೋರಿದರು.ವೇದಿಕೆಯಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣಾ ಧ್ಯಕ್ಷರಾದ ಮನ್ಸೂರ್ ಬೆಲ್ಮ,ಪಬ್ಲಿಕೇಶನ್ ಅಧ್ಯಕ್ಷರಾದ ಲತೀಫ್ ಪೇರೋಳಿ,ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು,ಸಾಂತ್ವನ ಕಾರ್ಯದರ್ಶಿ ಹನೀಫ್ ಜಿ.ಕೆ,ಇಹ್ಸಾನ್ ಕಾರ್ಯದರ್ಶಿ ಹನೀಫ್ ಕಿನ್ಯ, ಪಬ್ಳಿಕೇಶನ್ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ,ಆಡಳಿತ ಕಾರ್ಯದರ್ಶಿ ಸವಾದ್ ಉಳ್ಳಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ಕಕ್ಕೆಪದವು ನಿರೂಪಣೆ ಗೈದು,ಎಜುಕೇಷನ್ ಕಾರ್ಯದರ್ಶಿ ಅಶ್ರಫ್ ರೆಂಜಾಡಿ ಕೃತಜ್ಞತೆ ಸಲ್ಲಿಸಿದರು.