janadhvani

Kannada Online News Paper

ವೆನ್ಝ್ ಅಬ್ದುಲ್ ಅಝೀಝ್ ಕೊಲೆಯತ್ನ: ಆರೋಪಿಗಳ ಬಂಧನ ವಿಳಂಬ- ಖಂಡನೀಯ

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸಮಿತಿಯ ಕಾರ್ಯದರ್ಶಿ ಕೈಕಂಬದ ಸಾಮಾಜಿಕ ಮುಂದಾಳು ವೆನ್ಝ್ ಅಬ್ದುಲ್ ಅಝೀಝ್ ವಿರುದ್ಧ ಕೊಲೆ ಯತ್ನ ನಡೆದು ತೀವ್ರ ಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಘಟನೆ ನಡೆದು ಇಂದಿಗೆ ಮೂರು ದಿನಗಳು ಕಳೆದಿದೆ. ಹಲವರ ಮೇಲೆ ಎಪ್ ಐ ಆರ್ ದಾಖಲಾಗಿದ್ದರೂ ಇದುವರೆಗೆ ಬಂದನಾವಾಗದಿರುವುದು ಖೇದಕರ. ಕೈಕಂಬ ಪರಿಸರದಲ್ಲಿ ಸಾಮಾಜಿಕ ಶೈಕ್ಷಣಿಕ ಬಡವರ ಕಲ್ಯಾಣ ಕಾರ್ಯಗಳಿಗಾಗಿ ನಿರಂತರವಾಗಿ ದುಡಿಯುತ್ತಿದ್ದ, ವಿವಿಧ ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ವೆನ್ಝ್ ಅಬ್ದುಲ್ ಅಝೀಝ್ ರ ಕೊಲೆಯತ್ನವು ಪರಿಸರದ ಸಾಮಾಜಿಕ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.

ಸಮಾಜಘಾತುಕ ಶಕ್ತಿಗಳ ಎಲ್ಲಾ ವಿಧ ದುಷ್ಕೃತ್ಯಗಳ ವಿರುದ್ಧ ಪ್ರತಿಭಟಿಸಲು ಕೈಕಂಬ ಪರಿಸರದ ಸರ್ವ ಸಂಘ ಸಂಸ್ಥೆಗಳು ಮುಂದೆ ಬರಬೇಕಾದ ಅಗತ್ಯ ಇದೆ.ಆರೋಪಿಗಳು ರಾಜಾರೋಷವಾಗಿ ತಿರುಗುತ್ತಿದ್ದಾರೆಂದು ಕೈಕಂಬ ಸುತ್ತಮುತ್ತಲಿನ ಜನತೆಯು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಆದುದರಿಂದ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಂತಹ ನಡೆಯು ಪೋಲಿಸ್ ಇಲಾಖೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಹದ್ದಾಗಿದೆ. ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಸೂಕ್ತ ಕ್ರಮಕೈಗೊಂಡು, ಮುಂದೆ ಇಂತಹ ಪಾತಕ ಕೃತ್ಯಕ್ಕೆ ಇಳಿಯುವವರಿಗೆ ಎಚ್ಚರಿಕೆ ನೀಡುವಂತಾಗಿರಬೇಕು.

ಆಶ್ರಫ್ ಕಿನಾರ ಮಂಗಳೂರು
ರಾಜ್ಯ ಸದಸ್ಯರು ಕರ್ನಾಟಕ ಮುಸ್ಲಿಂ ಜಮಾಅತ್

error: Content is protected !! Not allowed copy content from janadhvani.com