janadhvani

Kannada Online News Paper

SSF ಈಶ್ವರಮಂಗಲ ಸೆಕ್ಟರ್ ವತಿಯಿಂದ ತಾಜುಲ್ ಫುಖಹಾಅ್ ಅನುಸ್ಮರಣೆ

ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ವತಿಯಿಂದ ಅಕ್ಟೋಬರ್ 10 ಶನಿವಾರದಂದು ತ್ವೈಬಾ ಸೆಂಟರ್ ಈಶ್ವರಮಂಗಲ ದಲ್ಲಿ ತಾಜುಲ್ ಫುಖಹಾಅ್ ಬೇಖಲ್ ಉಸ್ತಾದ್ ರವರ ಅನುಸ್ಮರಣಾ ಕಾರ್ಯಕ್ರಮವು ವಿಜೃಂಭಣೆಯಿಂದ ಸೆಕ್ಟರ್ ಅಧ್ಯಕ್ಷರಾದ ಅಬೂಬಕ್ಕರ್ ಲತೀಫಿ ಯವರ ಘನ ಅಧ್ಯಕ್ಷತೆಯಲ್ಲಿ ಜರಗಿತು.

ತ್ವೈಬಾ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಯವರು ಉಧ್ಘಾಟಿಸಿದರು. ಮುಖ್ಯ ಭಾಷಣಗಾರರಾದ ಯೂನುಸ್ ಸಖಾಫಿ ವಯನಾಡ್ ರವರು ಅನುಸ್ಮರಣಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಿಧ್ವಾಂಸರಾದ ಹಂಝ ಉಸ್ತಾದ್ ಕಾರ್ಯಕ್ರಮದ ಆರಂಭದಲ್ಲಿ ದುಹಾ ನಡೆಸಿದರು, ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಸದಸ್ಯರಾದ ಎ.ಎಂ.ಫೈಝಲ್ ಝುಹ್’ರಿ, ತ್ವಾಹ ಸಅದಿ, ಹಾಶಿರ್ ಸಖಾಫಿ, ಮಹಮ್ಮದ್ ಮದನಿ, ಅಬ್ದುಲ್ಲಾ ಮೆಣಸಿನಕಾಣ, ಹಮೀದ್ ಕೊಯಿಲ, ಶಂಸುದ್ದೀನ್ ಹನೀಫಿ, ಹುಸೈನ್ ಜೌಹರಿ ಮುಂತಾದವರು ಉಪಸ್ಥಿತರಿದ್ದರು. ಇಮ್ದಾದಿ ಮೆನಾಳ ರವರು ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com