janadhvani

Kannada Online News Paper

SSF ತಿಂಗಳಾಡಿ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಎಸ್ಸೆಸ್ಸೆಫ್ ತಿಂಗಳಾಡಿ ಶಾಖೆ ಇದರ ವತಿಯಿಂದ ಎಸ್ಸೆಸಫ್ ಇದರ ಧ್ವಜ ದಿನದ ಪ್ರಯುಕ್ತ ತಿಂಗಳಾಡಿ ಪ್ರಯಾಣಿಕರ ತಂಗುದಾಣ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಪ್ರಯಾಣಿಕರ ತಂಗುದಾಣದ ಒಳಗೆ ತುಂಬಾ ತುಂಬಿಕೊಂಡಿದ್ದ ಕಸಕಡ್ಡಿಗಳು ಹಾಗೂ ತಂಗುದಾಣದ ಮುಂದುಗಡೆ ಬೆಳೆದಿದ್ದ ಗಿಡ ಹಾಗೂ ಪೊದೆ ಗಳಿಂದ ಪ್ರಯಾಣಿಕರಿಗೆ ಬಸ್ಸು ತಂಗುದಾಣ ಬಳಸಲು ಆಗದೆ ಕಷ್ಟಪಡುತ್ತಿರುವ ವಿಷಯ ತಿಳಿದ ಎಸ್ಸೆಸ್ಸಫ್ ತಿಂಗಳಾಡಿ ಶಾಖಾ ಕಾರ್ಯಕರ್ತರು ಹೋಗಿ ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ SSF ಈಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ , SSF ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ , SSF ಕುಂಬ್ರ ಸೆಕ್ಟರ್ ಕೋಶಾಧಿಕಾರಿ ಇಸಾಕ್ ಮಾಡಾವು , ತಿಂಗಳಾಡಿ ಶಾಖಾ ಅಧ್ಯಕ್ಷರಾದ ಹಮೀದ್ ಮದನಿ, ಕೆಸಿಎಫ್ ನಾಯಕರಾದ ಆಸಿಫ್ ಮನ್ನಾಫ್ , ಯಾಕೂಬ್ ಕಟ್ಟತ್ತಾರು, ಶಾಖಾ ಕಾರ್ಯಕರ್ತರಾದ ಸಿರಾಜ್ , ರವೂಫ್, ಸತ್ತಾರ್, ನಹೀಂ , ನೌಶಾದ್, ಸಹದ್, ಸಾಬಿತ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com