ವಿಟ್ಲ: ಹೊಸ ವಿನ್ಯಾಸದೊಂದಿಗೆ ನಿರ್ಮಾಣಗೊಂಡ ಶತಮಾನದ ಇತಿಹಾಸ ಹೊಂದಿರುವ ಅಳಿಕೆ ಜುಮಾ ಮಸೀದಿಯ ನೂತನ ಮಸೀದಿ ಕಟ್ಟಡವು ಸೆ.18 ಶುಕ್ರವಾರ ಜುಮಾ ನಮಾಝಿನ ಮುಂಚಿತವಾಗಿ ಮಸೀದಿ ಗೌರವಾಧ್ಯಕ್ಷರಾದ ಸೈಯ್ಯದ್.ಪೂಕುಂಞ ತಂಙಳ್ ಉದ್ಯಾವರ ಅವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು.
ಸೈಯ್ಯದ್.ಮೀರ್ ಝಾಯಿದ್ ಅಲ್ ಬುಖಾರಿ ತಂಙಳ್ ನಲ್ಕ ಇವರು ಮಸೀದಿ ಕಟ್ಟಡದ ವಕ್ಫ್ ಕಾರ್ಯಗಳನ್ನು ನೆರವೇರಿಸಿ ಮಸೀದಿಯನ್ನು ಪ್ರಾರ್ಥನಾ ಮುಕ್ತಗೊಳಿಸಿದರು.
ಈ ಸಂಧರ್ಭದಲ್ಲಿ ಅಲ್ ಹಾಜ್ ಮಹಮೂದುಲ್ ಫೈಝಿ ವಾಲೆಮುಂಡೋವು ಅವರು ಗೌರವ ಉಪಸ್ಥಿತರಿದ್ದರು.
ನೂತನ ಮಸೀದಿಯ ಮೊದಲ ಖುತುಬಾವನ್ನು ಮಸೀದಿ ಖತೀಬರಾದ ಬಹು.ಅಬ್ದುಲ್ ಖಾದರ್ ಸಖಾಫಿ ಅವರು ಪಾರಾಯಣಗೈದರು.
ಮಸೀದಿಯ ಮಾಜಿ ಖತೀಬರುಗಳಾದ ಎ.ಮ್.ಇಬ್ರಾಹಿಂ ಮುಸ್ಲಿಯಾರ್ ಅಳಿಕೆ, ಬಿ.ಎ ಇಬ್ರಾಹಿಂ ಮುಸ್ಲಿಯಾರ್ ಪರಿಯಾಲ್ತಡ್ಕ, ಮಹಮ್ಮದ್ ಮದನಿ ಇರ್ದೆ, ಅಬ್ದುಲ್ ರಝಾಕ್ ನಯೀಮಿ ದರ್ಬೆ, ಅಬ್ದುಲ್ ಖಾದರ್ ಫೈಝಿ ಕೊಡುಂಗಾಯಿ, ಅಬ್ದುಲ್ಲ ಝೈನಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ವಾರ್ತಾಧಿಕಾರಿ ಅಬ್ದುಲ್ ಖಾದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಸಂಧರ್ಭದಲ್ಲಿ ನೂತನ ಮಸೀದಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಬಿ.ಕೆ. ಅಬೂಬಕ್ಕರ್ ಹಾಜಿ ಬೈರಿಕಟ್ಟೆ ಹಾಗೂ ಸಮಿತಿಯ ಎಲ್ಲಾ ಸದಸ್ಯರನ್ನು ಮತ್ತು ಇಂಜಿನಿಯರ್ ಗಳಾದ ಸಿನಾನ್ ಅಳಿಕೆ, ಶಾಹಿಲ್ ಅಳಿಕೆ ಮತ್ತು ಅಲ್ತಾಫ್ ವಿಟ್ಲ ಅವರನ್ನು ಮಸೀದಿ ಗೌರವಾಧ್ಯಕ್ಷ ಸೈಯ್ಯದ್. ಪೂಕುಂಞ ತಂಙಳ್ ಉದ್ಯಾವರ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಅಬ್ದುಲ್ ಸಲಾಮ್ ಮದನಿ ಅಳಿಕೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.