ಆಯುಷ್ಮಾನ್ ಭಾರತ್ ಹಾಗೂ ಆಯೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯಗಳನ್ನು ಪಡೆಯುವ ಆಯುಷ್ಮಾನ್ ಕಾರ್ಡ್ ನೊಂದಣಿ ಕಾರ್ಯಕ್ರಮವು SYS ಅಸೈ ಬ್ರಾಂಚ್ ವತಿಯಿಂದ ಸೆಪ್ಟೆಂಬರ್.17ರಂದು ಅಸೈ ಜಮಾಲಿಯ್ಯ ಮದ್ರಸದಲ್ಲಿ ನಡೆಯಿತು.
SYS ಅಧ್ಯಕ್ಷರಾದ ಹನೀಫ್ ಸಅದಿ ಯವರ ಘನ ಅಧ್ಯಕ್ಷತೆಯಲ್ಲಿ ಅಬ್ದುಲ್ ಖಾದರ್ ಸಖಾಫಿ ರವರು ದುಆ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಮುಹಮ್ಮದ್ ಅಕ್ಕರೆ ವಳಚಿಳ್ ಉದ್ಘಾಟಿಸಿದರು.
ಬಶೀರ್ ಝುಹ್ರಿ ಸ್ವಾಗತಿಸಿದರು ಮುಖ್ಯ ಅತಿಥಿಯಾಗಿ ಆಗಮಿಸಿದ ಇಸ್ಮಾಯಿಲ್ ಸಅದಿ ಯೂಸುಫ್ ರಝ್ವಿ ಹನೀಫ್ ಸಖಾಫಿ ಹಬೀಬ್ ಸಖಾಫಿ ”ಇಂತಹ ಕಾರ್ಯಕ್ರಮವನ್ನು ನಮ್ಮ ಕಾಲ ಬುಡಕ್ಕೆ ತಲುಪಿಸಲು ಯಶಸ್ವಿಯಾದ SYS ಯೋಜನೆಯು ಶ್ಲಾಘನಾರ್ಹ” ಎಂದು ಶುಭ ಹಾರೈಸಿದರು.
SYS ಬ್ರಾಂಚ್ ಕಾರ್ಯದರ್ಶಿ ಹಾಸನ್ ಸಅದಿ ವಂದಿಸಿದರು.