ಎಸ್ಸೆಸ್ಸೆಫ್ ಮರಿಕ್ಕಳ ಯುನಿಟ್ ವತಿಯಿಂದ ಎಸ್ಸೆಸ್ಸೆಫ್ ಧ್ವಜ ದಿನಾಚರಣೆಯನ್ನು ನಡೆಸಲಾಯಿತು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಧ್ವಜಾರೋಹಣ ಮಾಡಿ ಎಸ್ಸೆಸ್ಸೆಫ್ ನ ಉದಯ ಹಾಗೂ ನಡೆದು ಬಂದ ಹಾದಿಯ ಕುರಿತು ವಿವರಿಸಿ, ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ನರಿಂಗಾನ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಅಬ್ದುರ್ರಹ್ಮಾನ್ ಚಂದಹಿತ್ಲು ಹಾಗೂ ಝೈನು ಮೊಂಟೆಪದವು ಸಂದೇಶ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ಮರಿಕ್ಕಳ ಯುನಿಟ್ ಅಧ್ಯಕ್ಷ ಅಝರ್ ಅಗಲ್ತಬೆಟ್ಟು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಾರಿಸ್ ಮೊಂಟೆಪದವು,ಸಮದ್ ಆಳ್ವರಬೆಟ್ಟು ಹಬೀಬ್ ಚಂದಹಿತ್ಲು,ಮುಝಮ್ಮಿಲ್ ಮೊಂಟೆಪದವು ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಮರಿಕ್ಕಳ ಯುನಿಟ್ ಕಾರ್ಯದರ್ಶಿ ಶಾಕಿರ್ ಚಂದಹಿತ್ಲು ಸ್ವಾಗತಿಸಿದರು.ಇಕ್ಬಾಲ್ ನಿಡ್ಮಾಡ್ ವಂದಿಸಿದರು.