janadhvani

Kannada Online News Paper

‘Online or Offline’ ನಾವೇ ತೋಡಿಕೊಂಡ ಹೊಂಡದಲ್ಲಿ ನಾವೇ ಬಿದ್ದಾಗ..!

✍️ಇನ್ಝಿಮಾಮುಲ್ ಹಖ್, ಬಜ್ಪೆ

ನನ್ನ ಸ್ನೇಹಿತ ಹೊಸ ಜೀವನ ಆರಂಭಿಸುವುದರ ಆತುರದಲ್ಲಿ ಹೊಸ ವ್ಯಾಪಾರ ಆರಂಭಿಸಿದ. ತುಂಬಾ ಖರ್ಚು ಮಾಡಿ ಫರ್ಸ್ಟ್ ಕ್ಲಾಸ್ ಶೋರೂಂ ರೀತಿಯಲ್ಲಿ ಅಂಗಡಿ ತೆರೆದ. ಅದೂ ಕೂಡ ಮಂಗಳೂರಿನಲ್ಲಿ ಪ್ರತಿಷ್ಠಿತವಾದ ಒಂದು ಜಂಕ್ಷನ್ ಹತ್ತಿರ. ಹೀಗೇ ಊರಿಗೆ ಹೋದಾಗ ಭೇಟಿ ನೀಡಿದೆ, ಎಷ್ಟೇ ಆದರೂ ಹೊಸ ವ್ಯಾಪಾರ ಅಲ್ವ, ನನ್ ಕಡೆಯಿಂದ ಕೂಡ ಒಂದು ಸಣ್ಣ ಮಟ್ಟದ ವ್ಯಾಪಾರವೂ ಆಯಿತು. ಆದರೆ ಅವನ ಮಾತಿಗೂ, ಕಣ್ಣಿನ ಭಾಷೆಗೂ ಲಿಂಕ್ ಆಗ್ತನೇ ಇರಲಿಲ್ಲ. ಹಾಗೇ ಸುಮ್ನೆ ಜನ-ಸ್ಥಳ ಎಲ್ಲಾ ವ್ಯಾಪಾರಕ್ಕೆ ಸೆಟ್ ಆಯ್ತಾ ಅಂಥ ಕೇಳಿದೆ. ಹೇಗೂ ಅಂಗಡಿ ಬಾಡಿಗೆ ಸಂಬಳ ಅಂಥೆಲ್ಲಾ ಕೊಟ್ಟು ಅಲ್ಲಿಂದಲ್ಲಿಗೆ ಸಾರಿಯಾಗುತ್ತೆ ಅಂದ.

ಇಂಥಹ ಜನಜಂಗುಳಿ ಇರುವ ಸ್ಥಳದಲ್ಲಿ ವ್ಯಾಪಾರ ಬರದೇ ಇದ್ದರೆ ಮತ್ತೆಲ್ಲಿ ಬರುತ್ತೆ ಅಂಥ ಧೈರ್ಯದ ಮಾತೊಂದು ಹೇಳಿದೆ. ಅದಕ್ಕೆ ಅವನು ಈಗೆಲ್ಲಾ ಆನ್ಲೈನ್’ನಲ್ಲಿ COD ಅಂಥ ಬೆರಳ ತುದಿಯಲ್ಲೇ ಮಾರ್ಕೆಟ್ ಇರುವಾಗ ಅಂಗಡಿಗೆ ಯಾರು ಬರುತ್ತಾರೆ. ಹಾಗೆ ಬರುವ ವ್ಯಾಪಾರವೆಂದರೆ ರೆಗ್ಯುಲರ್ ಕಸ್ಟಮರ್ ಮತ್ತು ಪರಿಚಯಸ್ತರು ಮತ್ತು ಅವರ ಸ್ನೇಹಿತರು.ಒಟ್ಟಾರೆ ಹೇಳುವುದಾದರೆ ಶೇಖಡಾ ಎಪ್ಪತ್ತರಷ್ಟು ಜನ ಆನ್ಲೈನ್’ನಲ್ಲೇ ಖರೀದಿ ಮಾಡುತ್ತಾರೆ.

ಎಲೆಕ್ಟ್ರಾನಿಕ್’ಗೆ ಸಂಬಧಪಟ್ಟ ಅಂಗಡಿಯಾದ್ದರಿಂದ ರೇಟ್ ನೋಡಿ ಎಲ್ಲಾ ವಿಚಾರಿಸಿ ಓಕೆ ಆದರೆ ಮತ್ತೆ ಬರುತ್ತೇನೆ ಅಂಥ ಹೇಳಿ ಹೋದರೆ ಮತ್ತೆ ಆನ್ಲೈನ್’ನಲ್ಲಿ ಆಫರ್ ಇರುವಾಗ ಖರೀದಿ ಮಾಡುತ್ತಾರೆ. ಆನ್ಲೈನ್’ನವರಿಗೆ ಶೋರೂಂ ಬೇಕಿಲ್ಲ, ಹೆಚ್ಚು ಜನ ಬರುವ ಸ್ಥಳ ಬೇಕಿಲ್ಲ.Quality ಯಾರು ನೋಡ್ತಾರೆ, ಇವರು ಆಫರ್ ಮೇಲೆ ಆಫರ್ ಕೊಡ್ತಾ ಇರ್ತಾರೆ.
ಅಲ್ಲ ಈ ಆನ್ಲೈನ್ ಸೌಲಭ್ಯ ಇದೆ ಅಂಥ ನಾವು ಸಮಾಜದ ನಂಟನ್ನೇ ಕಳೆದುಕೊಂಡ್ರೆ ಹೇಗೆ.

ನೋಡಿ, ಈಗ ಮನೆಯ ಹತ್ತಿರ ಒಂದು ಸಣ್ಣ ವ್ಯಾಪಾರಸ್ಥನ ಬೇಕರಿ ಇದೆ. ಅಲ್ಲಿ ಐಸ್ಕ್ರೀಂ ಸಿಗುತ್ತೆ ಆದರೂ ಯಾರು ಅಲ್ಲಿ ತನಕ ಯಾರು ಹೊಗ್ತಾರೆ ಅಂಥ ಆಲಸ್ಯದಿಂದ ಹತ್ತು ಕಿಮೀ ದೂರದಿಂದ ಝೊಮಾಟೋ ಮತ್ತು ಸ್ವಿಗ್ಗೀ ಅವರು ಮನೆ ಬಾಗಿಲಿಗೆ ತಂದು ಕೊಡ್ತಾರೆ ಅಂಥ ಆನ್ಲೈನ್’ನಲ್ಲಿ ಆರ್ಡರ್ ಮಾಡುತ್ತಾರೆ. ಆ ಪುಣ್ಯಾತ್ಮ ಹೋಮ್ ಡೆಲಿವರಿ ಕೊಟ್ಟಾಗ ಐಸ್ಕ್ರೀಂ ನೀರಾಗಿದೆ, ಅದೂ ಕೂಡ ಐವತ್ತು ರೂ. ಐಸ್ಕ್ರೀಂ. ಇಲ್ಲಿ ಯಾರ ತಪ್ಪು ಇದೆ ಅಂಥ ಹೇಳ್ಬಹುದು…! ತಪ್ಪು ಒಪ್ಪಿನ ಪ್ರಶ್ನೆಯಲ್ಲ ನಾವಿಲ್ಲಿ ನೋಡ್ಬೇಕಾಗಿರುವುದು.

ಅಧುನಿಕ ವ್ಯವಸ್ಥೆಯನ್ನು ಯಾವ ರೀತಿ ಬಳಕೆ ಮಾಡಿಕೊಳ್ಬೇಕು ಅಂಥ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡ್ಬೇಕು. ಆನ್ಲೈನ್ ಸೌಲಭ್ಯವನ್ನು ಉಪಯೋಗಿಸದೇ ಇದ್ರೆ ನಾವು ದಡ್ಡರಾಗ್ತೀವಿ, ಆದರೆ ಸಮಾಜದ ಪರಿಚಯವನ್ನೇ ಕಳೆದುಕೊಂಡು ಮನೆ ಮತ್ತು ಆಫೀಸ್ ಬಿಟ್ಟು ಬೇರೆ ಜಗತ್ತನ್ನೇ ನೋಡದೇ ನಾವೇನು ವಿಜ್ಞಾನಿಯಾಗುತ್ತೇವಾ…? ಪ್ರಕೃತಿಯನ್ನು ನೇರವಾಗಿ ಸಂದರ್ಶಿಸಿ ಅನುಭವಿಸುವುದಕ್ಕೂ ಮೊಬೈಲ್’ನಲ್ಲಿ ವೀಡಿಯೋ ನೋಡಿ ಅನುಭವಿಸುವುದರಲ್ಲಿ ಎಷ್ಟು ವ್ಯತ್ಯಾಸವಿದೆಯೋ, ಅಷ್ಟೇ ವ್ಯತ್ಯಾಸ ಈ ಆನ್ಲೈನ್ ಸೌಲಭಯವನ್ನು ಉಪಯೋಗಿಸುವುದರಲ್ಲಿಯೂ ಇದೆ.

ಆನ್ಲೈನ್ ಸೌಲಭ್ಯ ಬಳಕೆ ಯಾವ ರೀತಿ…?

ಸಂದರ್ಭಕ್ಕೆ ಅನುಗುಣವಾಗಿ ಆನ್ಲೈನ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವುದು ಉತ್ತಮ ಅನ್ನುವುದು ನನ್ನ ವೈಯುಕ್ತಿಕ ಅಭಿಪ್ರಾಯ. ಉದಾ: ನನಗೊಂದು ವಸ್ತು ಖರೀದಿ ಮಾಡ್ಬೇಕು, ನಾನು ಕೂಡ ಫ್ರೀ ಆಗಿ ಮನೆಯಲ್ಲಿದ್ದೇನೆ. ಮನೆಯಲ್ಲಿದ್ದು ತುಂಬಾ ಬೋರ್ ಆಗ್ತಿದೆ. ಆಗ ಹೊರಗೆ ಕೆಲವೊಂದು ಅಂಗಡಿಗೆ ಹೋಗಿ ವಿಚಾರಿಸಿ ನಮಗೆ ಎಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತೋ ಅಲ್ಲಿಂದ ಖರೀದಿ ಮಾಡ್ಬೇಕು. ಇಲ್ಲಿ ಲಾಭ ಏನೆಂದರೆ ಹೊಸ ವ್ಯಕ್ತಿ ಪರಿಚರ, ಮಾತು, ಸಮಾಜದ ಅರಿವು ಮತ್ತು ಗುರುತು, ನೇರವಾಗಿ ಹೊಸ ಸ್ನೇಹಿತನಾಗುವ ಅವಕಾಶ, ಖರೀದಿ ಮಾಡುವ ವಸ್ತುವಿನ ನೇರ ಪ್ರದರ್ಶನ. ಅದು ಬಿಟ್ಟು ಕೈಯಲ್ಲಿ ಮೊಬೈಲ್ ಇದೆ, ಇಂಟರ್ನೆಟ್ ಸೌಲಭ್ಯ ಇದೆ ಅಂಥ ಯಂತ್ರೋಪಕರಣಗಳಂತೆ ನಾವಾದ್ರೆ ಏನು ಪ್ರಯೋಜನ? . ಅದೇ ಒಂದು ವೇಳೆ ನಾವು ಬ್ಯುಝಿಯಾಗಿದ್ದೇವೆ, ನೇರವಾಗಿ ಭೇಟಿಯಾಗಲು ಅಥವಾ ಖರೀದಿಸಲು ಸಮಯದ ಅಭಾವವಿದೆ, ಅಂಥಹ ಸಂದರ್ಭದಲ್ಲಿ ಆನ್ಲೈನ್ ಸೌಲಭ್ಯ ಉಪಯೋಗಿಸಿಕೊಳ್ಳುವುದರಲ್ಲಿ ಅರ್ಥವಿದೆ.

ಈ ಕೊರೋನ ಇರುವ ಸಂದರ್ಭದಲ್ಲಿ ಆನ್ಲೈನ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು. ಅದು ನಮ್ಮ ಆರೋಗ್ಯದ ಹಿತ ದ್ರಷ್ಟಿಯಿಂದ. ಆದರೆ ಸಾಮಾನ್ಯವಾಗಿ ಜಗತ್ತು ಯಥಾಸ್ಥಿತಿಗೆ ಬಂದಾಗ Online ಮತ್ತು Offline, ಇವೆರಡನ್ನೂ ಸಂದರ್ಭಕ್ಕನುಸಾರವಾಗಿ ಬಳಸಿಕೊಂಡು ಸಮಾಜದಲ್ಲಿ ಮನುಕುಲದ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಮಧ್ಯಮವರ್ಗದ ಮತ್ತು ಬಡ ಜನರ ಆರ್ಥಿಕ ವ್ಯವಸ್ಥೆ ಸುಧಾರಿಸಿಕೊಳ್ಳಲು ಎಲ್ಲರೂ Offline ವ್ಯವಸ್ಥೆಯ ಸೌಲಭ್ಯವನ್ನೂ ಕೂಡ ಉಪಯೋಗಿಸಿಕೊಳ್ಳಬೇಕು.

ಆನ್ಲೈನ್ ವ್ಯವಸ್ಥೆಯನ್ನು ವಿರೋಧಿಸಬೇಕಾ…!?

ಆನ್ಲೈನ್ ಸೌಲಭ್ಯವನ್ನು ಉಪಯೋಗಿಸುವ ಬಗ್ಗೆ ವಿರೋಧಿಸುತ್ತಿಲ್ಲ, ನಾನು ವಿರೋಧಿಸುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಕಂಪೆನಿಗಳಾದ ಅಮೇಝಾನ್’ನಂತಹ ಆನ್ಲೈನ್ ಸೌಲಭ್ಯವನ್ನು ನಿರಾಕರಿಸಿದರೆ ಅವರೇನು ಬಡವರಾಗುವುದಿಲ್ಲ, ಅದಲ್ಲದೇ ಅಂಥಹ ಕಂಪೆನಿಗಳು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಹೆಸರಿರುವವರ ಶೇರ್’ನಿಂದ ನಡೆಯುವುದಾಗಿದೆ. ಆದರೆ ನಮ್ಮದೇ ಸುತ್ತ ಮುತ್ತಲಿನಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವ ಜನರನ್ನು ನಾವು ನಿರಾಕರಿಸುವುದು ಎಷ್ಟರ ಮಟ್ಟಿಗೆ ಸರಿ…?
ಹಾಗೆ ಆನ್ಲೈನ್ ಸೌಲಭ್ಯದ ಅಗತ್ಯವಾದಾಗ ನಮ್ಮದೇ Local ‘ನಲ್ಲಿ ಹಲವರು ಆನ್ಲೈನ್ ಮೂಲಕ ವ್ಯಾಪಾರ ಮಾಡುತ್ತಿದ್ದಾರೆ. ಅವರನ್ನೇಕೆ ನಿರಾಕರಿಸಬೇಕು, ಅಲ್ವಾ….?
ಆನ್ಲೈನ್ ವಿಚಾರದಲ್ಲಿ ವ್ಯಾಪರದ ವಿಚಾರ ಮಾತ್ರವಲ್ಲ, ಶಿಕ್ಷಣ , ಸಭೆ ಅಂಥೆಲ್ಲಾ ವಾಟ್ಸಪ್’ನಂತಹ ಆನ್ಲೈನ್ ವ್ಯವಸ್ಥೆಗೆ ಮೊರೆ ಹೋಗುವುದು ತುಂಬಾನೆ Danger.

ಅದರ ಬಗ್ಗೆ ತುಂಬಾ ಆಳವಾಗಿ ಚಿಂತಿಸಿದರೆ ನಾವೆಷ್ಟು ಬುದ್ಧಿಹೀನರಾಗಿ ನಾವೇ ತೋಡಿಕೊಂಡ ಹಳ್ಳಕ್ಕೆ ನಾವು ಯಾವ ರೀತಿ ಬೀಳಲಿದ್ದೇವೆಂದು ಅರ್ಥವಾಗುತ್ತೆ.

ಭಾರತ ಇನ್ನೂ ಕೂಡ Developing Country, ಕೇವಲ Digital ಆಗಿ ಮುಂದುವರಿಯುವ ಮೂಲಕ Developed ಅಂಥ ಕರೆಸಿಕೊಳ್ಳುವುದಿಲ್ಲ. ಪೆನ್ನು ಹಿಡಿದು ಸಹಿ ಹಾಕುವವರು ಕೊನೆಗೆ ಫಿಂಗರ್ಟಪ್ರಿಂಟ್ ಎಂಬ ಹೆಬ್ಬೆಟ್ಟಿನ ಗುರುತಿಗೆ ಹಿಂತಿರುಗಲು ಜಗತ್ತಿಗೆ ಅನಿವಾರ್ಯವಾಯಿತು. ಅದೇನೆ ಇರಲಿ ಯಾವುದೇ ಸೌಲಭ್ಯ ಸಿಕ್ಕಾಗ ಅದನ್ನು ಯಾವ ರೀತಿ, ಎಲ್ಲಿ ,ಯಾಕಾಗಿ ಉಪಯೋಗಿಸಿಕೊಳ್ಳಬೇಕೆಂಬ ಅರಿವು ನಮ್ಮಲ್ಲಿ ಇಲ್ಲದಿದ್ದರೆ, ಅಲ್ಲೇ ನಾವು ವಿಫಲರಾಗಿಗುವುದು.

error: Content is protected !! Not allowed copy content from janadhvani.com