janadhvani

Kannada Online News Paper

ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಕ್ಯಾಪ್ಸ್ ಟೋನ್ ಕಾನ್ಫರೆನ್ಸ್ ಯಶಸ್ವಿ ಸಮಾಪ್ತಿ

ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕೊಣಾಜೆ ಸೆಕ್ಟರ್ ವತಿಯಿಂದ ಅಧೀನ ಶಾಖಾ ಸಮಿತಿ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಸಾಂಘಿಕ ಸಬಲೀಕರಣ ತರಭೇತಿ ಕಾರ್ಯಕ್ರಮವು ‘ಕ್ಯಾಪ್ಸ್ ಟೋನ್ ಕಾನ್ಫರೆನ್ಸ್’ ಫರೀಧ್ ನಗರ ಸುನ್ನೀ ಸೆಂಟರ್ ನಲ್ಲಿ ಜರುಗಿತು.

ಎಸ್ಸೆಸ್ಸಫ್ ಕರ್ನಾಟಕ ರಾಜ್ಯ್ ಉಪಾಧ್ಯಕ್ಷರಾದ ಹಾಫಿಝ್ ಸುಫಿಯಾನ್ ಸಖಾಫಿ ಮೂಡಬಿದ್ರೆ ಮುಖ್ಯ ತರಭೇತಿ ನೀಡಿದರು. ಸೆಕ್ಟರ್ ಅಧ್ಯಕ್ಷರಾದ ಉಸ್ಮಾನ್ ಫಜೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬದ್ರುದ್ದೀನ್ ಸಖಾಫಿ ಕೊಣಾಜೆ ಕಾರ್ಯಕ್ರಮ ಉದ್ಘಾಟಿಸಿದರು.

ಎಸ್ಸೆಸ್ಸಫ್ ಮುಡಿಪು ಡಿವಿಷನ್ ಅಧ್ಯಕ್ಷರಾದ ಇಬ್ರಾಹೀಂ ಅಹ್ಸನಿ, ಸೆಕ್ಟರ್ ನೇತಾರರಾದ ಇಕ್ಬಾಲ್, ನೌಫಲ್, ಫೈಝಲ್ ಮತ್ತಿತರ ಶಾಖಾ ಪಧಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.