janadhvani

Kannada Online News Paper

ಸುನ್ನೀ ಸ್ಟೂಡೆಂಟ್ಸ್ ಫೆಢರೇಶನ್(ಎಸ್.ಎಸ್.ಎಫ್) ಬೋಳಂತೂರು ಶಾಖೆ, ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಆಯುಷ್ಮಾನ್ ಆರೋಗ್ಯ ಕಾರ್ಡ್’ ನೋಂದಣಿ ಅಭಿಯಾನವು Q.I.M.ಬೋಳಂತೂರು ಮದ್ರಸದಲ್ಲಿ ನಡೆಯಿತು.

ಆಗಸ್ಟ್ 30 ಮತ್ತು ಸೆಪ್ಟೆಂಬರ್ 4 ಈ ಎರಡು ದಿನಗಳಲ್ಲಾಗಿ ನಡೆದ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ R.J.M.ಮಸೀದಿ ಖತೀಬರಾದ ಅಬ್ದುಲ್ ಖಾದರ್ ಸಖಾಫಿ ದುಆ ಆಶಿರ್ವಚನ ನಡೆಸಿದರು, ಹಾಗೂ ಇಬ್ರಾಹೀಂ ಖಲೀಲ್ ಮುಸ್ಲಿಯಾರ್ (ಪ್ರ ಕಾರ್ಯದರ್ಶಿ SYS ದ.ಕ. ಜಿಲ್ಲೆ) ಸ್ವಾಗತವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಹಮೀದ್ ನಾಡಾಜೆ(ಅಧ್ಯಕ್ಷರು ರಹ್ಮಾನಿಯ ಜುಮಾ ಮಸೀದಿ ಮತ್ತು ಖುವ್ವತ್ತುಲ್ ಇಸ್ಲಾಂ ಮದ್ರಸ, ಬೊಳಂತೂರು) ಕರೀಂ ಕದ್ಕಾರ್, ಸಿದ್ದೀಕ್ ನಡಾಜೆ (ಅಧ್ಯಕ್ಷರು ಎಸ್.ಎಸ್.ಎಫ್ ಬೋಳಂತೂರು ಶಾಖೆ), ಅಮೀರ್ ಮಜಲ್ ಕೋಡಿ(ಪ್ರ. ಕಾರ್ಯದರ್ಶಿ), ಹಾಗೂ ಸದಸ್ಯರಾದ ಜಾಫರ್ ಬೈಲ್,ಅಬ್ದುಲ್ ಖಾದರ್ (ರಿಕ್ಷಾ), ದಾವೂದ್ ಮಜಲ್ ಕೋಡಿ, ತಸ್ಲೀಂ ಮುರ, ಇಸ್ಮಾಯಿಲ್, ಶಹೀದ್ ಬೈಲ್, ಜಾಬಿರ್ ಕಲ್ಪಣೆ, ಜಝೀಲ್ ಬೈಲ್,ಉಪಸ್ಥಿತರಿದ್ದರು.

error: Content is protected !!
%d bloggers like this: