janadhvani

Kannada Online News Paper

ಎಸ್ಡಿಪಿಐ ಹಳೆಯಂಗಡಿ ವಲಯ: ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ಹಳೆಯಂಗಡಿ:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಳೆಯಂಗಡಿ ವಲಯದ ವತಿಯಿಂದ ಉಚಿತ ಆಯುಷ್ಮನ್ ಕಾರ್ಡ್ ನೋಂದಣಿ ಅಭಿಯಾನವು
ಬಾನುವಾರದಂದು ಇಂದಿರಾ ನಗರದ ಎಸ್.ಡಿ.ಪಿ.ಐ ಕಛೇರಿಯಲ್ಲಿ ನಡೆಯಿತು

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷರಾದ ಆಸೀಫ್ ಕೋಟೆ ಬಾಗಿಲು ಹಾಗೂ ಕಾರ್ಯದರ್ಶಿ ನಿಸಾರ್ ಮರವೂರು ಜಂಟಿಯಾಗಿ ನೋಂದಾಯಿತ ಫಲಾನುಭವಿಗಳಿಗೆ ಉಚಿತ ಆಯುಷ್ಮಾನ್ ಕಾರ್ಡ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಿಜಿಟಲ್ ಸೇವಾ ಕೇಂದ್ರ ಹಳೆಯಂಗಡಿ ಇದರ ಶ್ರೀ ಅಶೋಕ್ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಸುಮಾರು 300 ಕ್ಕಿಂತಲೂ ಅಧಿಕ ನಾಗರಿಕರಿಗೆ ನೊಂದನಿ ಮಾಡಿ ಸ್ಥಳದಲ್ಲಿಯೇ ಉಚಿತ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
ಸಾರ್ವಜನಿಕರಿಗೆ ಪ್ರಸ್ತುತ ಅವಶ್ಯಕವಾಗಿರುವ ಈ ಕಾರ್ಯಕ್ರಮವನ್ನು ಸಂಘಟಿಸಿದ ಎಸ್.ಡಿ.ಪಿ.ಐ ಸದಸ್ಯರ ಕಾರ್ಯ ವೈಖರಿಯನ್ನು ಅಶ್ರಫ್ ಮಾಚಾರ್ ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಪಿ.ಎಪ್.ಐ ಜಿಲ್ಲಾ ಅಧ್ಯಕ್ಷರಾದ ಮೊಹಿದ್ದೀನ್ ಹಳೆಯಂಗಡಿ, ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಉಪಾಧ್ಯಕ್ಷ ಇಕ್ಬಾಲ್, ಎಮ್.ಎ, ಎಸ್.ಡಿ.ಟಿ.ಯು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಕಾರ್ಯದರ್ಶಿ ಹಾರೀಸ್ ನವರಂಗ್, ಎಸ್.ಡಿ.ಪಿ.ಐ ಹಳೆಯಂಗಡಿ ಕ್ಷೇತ್ರ ಅಧ್ಯಕ್ಷರಾದ ರೀಯಾಝ್, ಉಪಾಧ್ಯಕ್ಷರಾದ ಮುಮ್ತಾಜ್ ಅಲಿ, ರಿಲಯನ್ಸ್ ಅಶೋಸಿಯೇಸನ್ ಬೊಳ್ಳೂರು ಅಧ್ಯಕ್ಷ ಮುಬಾರಕ್ ಬೊಳ್ಳೂರು, ಸಿದ್ದೀಕ್ ಬೊಳ್ಳೂರೂ, ಅಕ್ಬರ್ ಬೊಳ್ಳೂರು ಉಪಸ್ಥಿತರಿದ್ದರು.

ಹಿದಾಯತ್ ಬೊಳ್ಳೂರು, ಆಸೀಫ್ ಬೊಳ್ಳೂರು, ಅಝ್ವಾನ್, ಸಂಶೀರ್, ಕಬೀರ್, ಮುಬಾರಕ್, ಆಸೀಫ್ ಇಂದಿರಾನಗರ, ಸರ್ಫರಾಜ್, ಯಾಸೀನ್, ಕಬೀರ್, ರೀಯಾಝ್, ಭಾಷೀತ್, ನಿಸಾರ್, ಶಮೀಮ್ ಬೊಳ್ಳೊರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ: ಅದ್ದಿ ಬೊಳ್ಳೂರು