ಸವಣೂರು, ಸೆಪ್ಟೆಂಬರ್ 04: SDPI ಸವಣೂರು ವಲಯದ ವತಿಯಿಂದ ಜನಪರ ಅಭಿವೃದ್ಧಿ ಕಾರ್ಯಗಳೊಂದಿಗೆ ಯಶಸ್ವಿಯಾಗಿ ಐದು ವರ್ಷ ಪೂರೈಸಿದ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಹೊಸ ಸದಸ್ಯರ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಂತೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು. SDPI ಸುಳ್ಯ ವಿದಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯರವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ SDPI ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆಯವರು ನಮ್ಮ ಪಕ್ಷವು ದಮನಿತರ, ದಲಿತರ ಪರವಾಗಿದೆ. ಇಲ್ಲಿನ ದಲಿತರು, ಬಿಲ್ಲವರು, ಬಂಟರು, ಮುಸ್ಲಿಮರ ನಡುವೆ ಕೋಮು ವೈಶಮ್ಯದ ಗೋಡೆಗಳನ್ನು ಕಟ್ಟಲಾಗಿದೆ. ಆ ಗೋಡೆಗಳನ್ನು ಕೆಡವಿ ಸೌಹಾರ್ದತೆಯ ಸೇತುವೆ ನಿರ್ಮಿಸೋಣ ಎಂದು ಕರೆ ನೀಡಿದರು.
SDPI ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಫರಂಗಿಪೇಟೆ, SDPI ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, PFI ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಾಬೀರ್ ಅರಿಯಡ್ಕರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಳೆದ ಐದು ವರ್ಷಗಳಲ್ಲಿ ಯಶಸ್ವಿಯಾಗಿ ಅಭಿವೃದ್ಧಿ ಕಾರ್ಯಗಳೊಂದಿಗೆ ಜನಸೇವೆಗೈದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ SDPI ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ, ಶ್ರೀಮತಿ ಚೆನ್ನು, ಶ್ರೀಮತಿ ಮೀನಾಕ್ಷಿ, ರಪೀಕ್ ಎಂ.ಎ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗ್ರಾ.ಪಂ. ಮಾಜಿ ಸದಸ್ಯೆ ಮೀನಾಕ್ಷಿಯವರು ಮಾತನಾಡಿ ಎಲ್ಲೋ ಮೂಲೆಯಲ್ಲಿದ್ದ ನನ್ನನ್ನು ಸಮಾಜ ಗುರುತಿಸುವಂತೆ ಮಾಡಿದ ಎಸ್‌ಡಿಪಿಐ ಪಕ್ಷಕ್ಕೆ ನಾನು ಸದಾ ಚಿರ ಋಣಿಯಾಗಿರುತ್ತೇನೆಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಸುಮಾರು 50 ಕ್ಕೂ ಹೆಚ್ಚು ಮಂದಿ ಪಕ್ಷದ ತತ್ವ, ಸಿದ್ದಾಂತ ಮೆಚ್ಚಿ ಪಕ್ಷ ಸೇರ್ಪಡೆಯಾದರು.
SDPI ಸುಳ್ಯ ವಿದಾನಸಭಾ ಸಮಿತಿ ಕಾರ್ಯದರ್ಶಿ ಮುಸ್ತಫಾ ಎಂ ಕೆ, ಸದಸ್ಯರಾದ ಬಾಬು ಎನ್ ಸವಣೂರು, SDPI ಪುತ್ತೂರು ವಿಧಾನಸಭಾ ಸಮಿತಿ ಕಾರ್ಯದರ್ಶಿ ಯಹ್ಯಾ ಕೂರ್ನಡ್ಕ, ಸದಸ್ಯರಾದ ಪಿಬಿಕೆ ಮಹಮ್ಮದ್, ದಲಿತ ಸಂಘರ್ಷ ಸಮಿತಿ ಕಡಬ ಅಧ್ಯಕ್ಷರಾದ ಪುಟ್ಟಣ್ಣ ಆಲಂಕಾರು,
ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಬೀನಾ ಅಂಕತ್ತಡ್ಕ, ಝೌರಾಬಿ ಶಾಂತಿನಗರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
SDPI ಸವಣೂರು ವಲಯ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ ಸ್ವಾಗತಿಸಿದರು, ಕಾರ್ಯದರ್ಶಿ ರಫೀಕ್ ಎಂ ಎಸ್ ವಂದಿಸಿದರು.