janadhvani

Kannada Online News Paper

SჄS ದ.ಕ.ಜಿಲ್ಲೆ ವೆಸ್ಟ್ ವತಿಯಿಂದ ಅಲ್ ಉಸ್ರತುತ್ತಯ್ಯಿಬ ಕಾರ್ಯಕ್ರಮ

ಮಂಗಳೂರು: SჄS ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ SჄS ಬ್ರಾಂಚ್ ವ್ಯಾಪ್ತಿಯ ಮನೆಗಳಲ್ಲಿ ತಿಂಗಳಿಗೊಮ್ಮೆ ನಡೆಸುವ ‘ಅಲ್ ಉಸ್ರತುತ್ತಯ್ಯಿಬ’
(ಸಂತುಷ್ಟ ಕುಟುಂಬ) ಎಂಬ ಕಾರ್ಯಕ್ರಮದ ಅನುಷ್ಠಾನದ ಕುರಿತ ಸಭೆಯು ಇಲ್ಮ್ ಸೆಂಟರ್ ಪಡೀಲಿನಲ್ಲಿ ಜರುಗಿತ್ತು.

ತಿಳಿದುಕೊಳ್ಳಲೇಬೇಕಾದ ನಿರ್ದಿಷ್ಟ ವಿಷಯಗಳ ಮಾಹಿತಿಯನ್ನೊಳಗೊಂಡ ಅಲ್ ಉಸ್ರತುತ್ತಯ್ಯಿಬ
ಪ್ರತಿಯೊಂದು ಮನೆ ಮಂದಿ ನಿಗದಿತ ಸಮಯದಲ್ಲಿ ಸೇರಿಕೊಂಡು ನಡೆಸಬೇಕಾದ ಕಾರ್ಯಕ್ರಮ ಇದಾಗಿದೆ.ಇದರೊಂದಿಗೆ ಪ್ರತಿ ಮನೆಗಳ‌ ಮೂಲಕ ಸುನ್ನತ್ ಜಮಾಅತ್ ನ ಆದರ್ಶಗಳನ್ನು ಪ್ರಚಾರಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SჄS ಜಿಲ್ಲಾಧ್ಯಕ್ಷ ಸಿ.ಎಚ್ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ ವಹಿಸಿದರು.ಕಾರ್ಯಕ್ರಮವನ್ನು ದಅವಾ ಮತ್ತು ಶಿಕ್ಷಣ ಸಮಿತಿ ಕಾರ್ಯದರ್ಶಿ ಬದ್ರುದ್ದೀನ್ ಅಝ್ಹರಿ ಉದ್ಘಾಟಿಸಿದರು.SჄS ಜಿಲ್ಲಾ ನಾಯಕರಾದ ಇಸ್ಮಾಯಿಲ್ KSRTC, ಇಸ್ಹಾಕ್ ಝುಹ್ರಿ ಸೂರಿಂಜೆ,ವಿಎ ಮುಹಮ್ಮದ್ ಸಖಾಫಿ ವಳವೂರು ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಸದಸ್ಯರಾದ ಫಾರೂಕ್ ಕೆಸಿ ರೋಡ್, ಅಬ್ದುಲ್ ಮಜೀದ್ ಹರೇಕಳ, ಉಮರುಲ್ ಫಾರೂಕ್ ಶೇಡಿಗುರಿ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲೆಯ ಸೆಂಟರ್ ಪ್ರಧಾನ ಕಾರ್ಯದರ್ಶಿಗಳು ಮತ್ತು ಸೆಂಟರ್ ದ ಅವಾ ಕಾರ್ಯದರ್ಶಿಗಳು ಭಾಗವಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

error: Content is protected !! Not allowed copy content from janadhvani.com