ಮಂಗಳೂರು: ಜಿಲ್ಲೆಯ ಮುಸ್ಲಿಮರ ಅಭಿಮಾನವೂ ಮುಸ್ಲಿಂ ಲೀಗಿನ ರಾಜ್ಯ ನಾಯಕರೂ ಆಗಿದ್ದ ದಿವಂಗತ ಸಿ ಹಮೀದ್ ರ ಹಾದಿಯನ್ನೆ ತುಳಿದು ಮುಸ್ಲಿಂ ಲೀಗಿನ ಆಸ್ತಿತ್ವವನ್ನು ಉಳಿಸಿ ಬೆಳೆಸಿದ್ದ ಅವರ ತೃತೀಯ ಪುತ್ರ ಅಹ್ಮದ್ ಸಿ ಜಮಾಲ್ ಅಲ್ಪಕಾಲದ ಅನಾರೋಗ್ಯ ದಿಂದ ನಿಧನರಾಗಿದ್ದು ದ ಕ ಜಿಲ್ಲಾ ಮುಸ್ಲಿಂ ಲೀಗ್ ತೀವ್ರ ಸಂತಾಪ ಸೂಚಿಸಿದೆ.
ಮುಸ್ಲಿಂ ಸಮಾಜವು ರಾಜಕೀಯ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದಕ್ಕೆ ಕೇರಳ ಮಾದರಿಯಲ್ಲಿ ಮುಸ್ಲಿಂ ಲೀಗನ್ನು ಬಲಪಡಿಸುವುದೊಂದೇ ದಾರಿ ಎಂದು ನಂಬಿದ್ದ ಅಹ್ಮದ್ ಜಮಾಲ್ ಅದಕ್ಕಾಗಿ ಅವಿರತ ಶ್ರಮಪಟ್ಟಿದ್ದಾರೆ.
ಹಲವು ಸಂಘ ಸಂಸ್ಥೆಗಳ ನೇತೃತ್ವ ದಲ್ಲಿ ಮಿಂಚಿದ ಜಮಾಲ್ ಮುಸ್ಲಿಂ ಲೀಗಿನ ಜಿಲ್ಲಾದ್ಯಕ್ಷರಾಗಿ ರಾಜ್ಯ ಸಮಿತಿಯ ಉಪಾದ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.ಮಂಗಳೂರು ಬದ್ರಿಯಾ ಶಿಕ್ಷಣ ಸಂಸ್ಥೆಯ ಮಾತೃ ಸಂಘಟನೆ ಮುಸ್ಲಿಂ ಎಜುಕೇಶನಲ್ ಅಸೋಸಿಯೇಶನ್ ಇದರ ಸಕ್ರಿಯ ಸದಸ್ಯರಾಗಿದ್ದರು.
ಎಲ್ಲಾ ರಾಜಕೀಯ ಪಕ್ಷಗಳ ಉನ್ನತ ನಾಯಕರೊಂದಿಗೆ ಸಂಪರ್ಕವನ್ನು ಇಟ್ಟು ಕೊಂಡಿದ್ದ ಜಮಾಲ್ ರವರು ಸಮಸ್ಯೆಯನ್ನು ಹೇಳಿಕೊಂಡು ಬರುವವರಿಗೆ ತಕ್ಷಣ ಸ್ಪಂದಿಸುವ ಗುಣಹೊಂದಿದ್ದರು.ಇವರ ನಿಧನದಿಂದಾಗಿ ಸಮಾಜದ ಒಬ್ಬ ಹಿರಿಯ ಧುರೀಣರನ್ನು ಕಳಕೊಂಡಂತಾಗಿದ್ದು ಜಿಲ್ಲಾ ಮುಸ್ಲಿಂ ಲೀಗ್ ವತಿಯಿಂದ ಸಂತಾಪ ಸೂಚಿಸಲಾಗಿದೆ.
ತಬೂಕ್ ಅಬ್ದುಲ್ ರಹಿಮಾನ್ ದಾರಿಮಿ ಅದ್ಯಕ್ಷರು ಜಿಲ್ಲಾ ಮುಸ್ಲಿಂ ಲೀಗ್