janadhvani

Kannada Online News Paper

ತಖ್ವಾ ಮಸೀದಿಗೆ ದುಷ್ಕರ್ಮಿಗಳಿಂದ ಹಾನಿ: ಸೂಕ್ತ ಕ್ರಮಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹ

ಮಂಗಳೂರು ಪಂಪ್ವೆಲ್ ನಲ್ಲಿರುವ ಪ್ರತಿಷ್ಠಿತ ಮಸ್ಜಿದ್ ತಖ್ವಾ ಮಸೀದಿಗೆ ದುಷ್ಕರ್ಮಿಗಳು ನಿನ್ನೆ ಬಾಟಲು ಎಸೆದು ಹಾನಿಗೊಳಿಸಿದ್ದು, ಕೃತ್ಯದ ಹಿಂದೆ ಜಿಲ್ಲೆಯಲ್ಲಿ ಬೃಹತ್ ಗಲಭೆ ಸೃಷ್ಟಿಸುವ ವಾಸನೆ ಬಡಿಯುತ್ತಾ ಇದೆ. ಕೋಮು ಗಲಭೆ ಸೃಷ್ಟಿಸುವ ಮುಂದುವರಿದ ಭಾಗವಾಗಿ ಜಿಲ್ಲೆಯ ಕೆಳವರ್ಗದ ಯುವಕರನ್ನು ಬಳಸಿ ಮುಸ್ಲಿಮರ ಧಾರ್ಮಿಕ ಕೇಂದ್ರಗಳಿಗೆ ಹಾನಿಗೊಳಿಸಿ, ಆ ಮೂಲಕ ಮುಸ್ಲಿಮರನ್ನು ಪ್ರಚೋದಿಸಿ,ಬೀದಿಗೆ ಇಳಿಸಿ, ಹಿಂದಿಂದ, ಅದೇ ಕೆಳವರ್ಗದ ದಲಿತ,ಬಿಲ್ಲವ ಯುವಕರಿಂದ ಕಲ್ಲು,ಹೊಡೆಯಿಸಿ,ಗಲಭೆ ಎಬ್ಬಿಸಿ,ಜಿಲ್ಲೆಯಲ್ಲಿ ಬೃಹತ್ ಕೋಮು ಗಲಭೆ ಸೃಷ್ಟಿಸಿ,ಮತೀಯ ದ್ರುವೀಕರಣಕ್ಕೆ ಪ್ರಯತ್ನಿಸುವ ಹುನ್ನಾರ ಇದಾಗಿರುತ್ತದೆ.

ದ.ಕ.ಜಿಲ್ಲೆಯ ಮುಸ್ಲಿಮರಿಗೆ ಇಂತಹ ಕುಕೃತ್ಯ ಗಳ ಬಗ್ಗೆ ತಿಳಿದಿದೆ. ಇತ್ತೀಚೆಗೆ ವಕ್ಫ್ ಭವನಕ್ಕೆ ದುಷ್ಕರ್ಮಿಗಳು ಮಾಡಿದ ಹಾನಿ ಇದೇ ಹುನ್ನಾರದ ಬಾಗವಾಗಿರುತ್ತದೆ.ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸುವುದು ಒಳಿತು. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ.

ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com