janadhvani

Kannada Online News Paper

ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಡಿವೈಎಫ್‌ಐನಿಂದ ಮನವಿ

ಹರೇಕಳ : ಹರೇಕಳ ಗ್ರಾಮದ ಒಂದನೇ ಮತ್ತು ಎರಡನೇ ವಾರ್ಡ್ ವ್ಯಾಪ್ತಿಯ ಪ್ರದೇಶಗಳಾದ ಕೊಜಪಾಡಿ, ದೇರಿಕಟ್ಟೆ, ಉಂಬುದ ಮೊದಲಾದ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಡಿವೈಎಫ್‌ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಇಲ್ಲಿನ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ ಕಳೆದ ಹಲವು ದಿನಗಳಿಂದ ಈ ಭಾಗಕ್ಕೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಮಳೆಗಾಲದ ಸಂದರ್ಭದಲ್ಲೇ ಹೀಗಾದರೆ ಮುಂಬರುವ ಬಿಸಿಲಿನ ಸಮಯದಲ್ಲಿ ಇಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂದು ಇಲ್ಲಿನ ನಾಗರೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪಂಚಾಯತ್ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಈ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿಯೋಗದಲ್ಲಿ ಡಿವೈಎಫ್‌ಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷರಾದ ನಿಝಾಮ್ , ಎವ್‌ರಿಸ್ ಕುಟಿನ್ಹಾ , ಹನೀಫ್ ಪೋಡಾರ್, ಸ್ಥಳೀಯ ಸಿಪಿಐಎಂ ಮುಖಂಡರಾದ ಸುಂದರ ಪೂಜಾರಿ , ಉಮರಬ್ಬ ನ್ಯೂಪಡ್ಪ್ಬು, ಸತ್ತಾರ್ ಕೊಜಪಾಡಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com