ಗದಗ ಎಜ್ಯು ಮಿಷನ್ ಇದರ ಶೈಕ್ಷಣಿಕ ಕ್ರಾಂತಿಗಾಗಿ ಅಂತರಾಷ್ಟ್ರೀಯ ಸಮಿತಿ ‘ಗದಗ ಮಿಷನ್ ಪ್ರಮೋಶನ್ ಕೌನ್ಸಿಲ್ (GPC)’ ರಚಿಸಲಾಯಿತು. ಗದಗ್ ಎಜು ಮಿಷನ್ ಪ್ರ.ಕಾರ್ಯದರ್ಶಿ ಅಸ್ರಾರ್ ಸಖಾಫಿ ಅಲ್-ಖಾದಿರಿ ಇವರ ಪ್ರಾರ್ಥನೆ ಮೂಲಕ ಆರಂಭಗೊಂಡ ಕಾರ್ಯಕ್ರಮವು ಬದ್ರುದ್ದೀನ್ ಹಾಜಿ ಸುಡಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಝೀಝ್ ಹಾಜಿ ದಮಾಮ್ ರವರು ನೆರವೇರಿಸಿದರು.
ಗದಗ ಜಿಲ್ಲೆಯ ಶೈಕ್ಷಣಿಕ ಉನ್ನತಿ ಯಾವ ರೀತಿಯಲ್ಲಾಗಬೇಕೆಂಬುದನ್ನು ಅಧ್ಯಕ್ಷರು ಸವಿಸ್ತಾರವಾಗಿ ವಿವರಿಸಿದರು. ತದನಂತರ ಗದಗ ಎಜ್ಯು ಮಿಷನ್ ಚೇರ್ಮ್ಯಾನ್ ಮನ್ಸೂರ್ ಅಲ್ ಖಾದಿರಿಯವರು ವಿಷಯ ಮಂಡನೆ ಮಾಡಿದರು.
ನಂತರ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಸಮಿತಿಯ ಗೌರವಾಧ್ಯಕ್ಷರನ್ನಾಗಿ ಬದ್ರುದ್ದೀನ್ ಹಾಜಿ ಸುಡಾನ್, ಅಧ್ಯಕ್ಷ ರನ್ನಾಗಿ ಪವಿತ್ರ ಗ್ರೂಪ್ ನ ಅಝೀಝ್ ಹಾಜಿ ದಮಾಂ, ಪ್ರಧಾನ ಕಾರ್ಯದರ್ಶಿ ಯಾಗಿ ಅಝ್ವೀರ್ ತ್ವಾಯಿಫ್ ಹಾಗೂ ಕೋಶಾಧಿಕಾರಿಯಾಗಿ ಹನೀಫ್ ಇಂಜಿನಿಯರ್ ಫ್ರಾನ್ಸ್ ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಲಿ ದೋಸ್ರಿ ಮಡಿಕೇರಿ ದಮ್ಮಾಮ್, ಕಾರ್ಯದರ್ಶಿಯಾಗಿ ಖಲೀಲ್ ರಹ್ಮಾನ್ ರಿಯಾದ್, ಮೀಡಿಯಾ ಕಾರ್ಯದರ್ಶಿಯಾಗಿ ಖಲೀಲ್ ದಮಾಮ್, ಸಲಹೆಗಾರರಾಗಿ ಅಲ್ ಉಸ್ತಾದ್ ಜಾಫರ್ ಅಹ್ಮದ್ ನೂರಾನಿ, ಅಹ್ಮದ್ ಬಾವ ಹಾಜಿ ಏಶ್ಯನ್, ಬಶೀರ್ ಹಾಜಿ ಕುಂಬ್ರ ಅವರನ್ನು ಆಯ್ಕೆ ಮಾಡಲಾಯಿತು. ಸಂಯೋಜಕರಾಗಿ ಮುಹಮ್ಮದ್ ಮನ್ಸೂರ್ ಅಲ್-ಖಾದಿರಿ ಗದಗ, ಅಸ್ರಾರ್ ಸಖಾಫಿ ಅಲ್-ಖಾದಿರಿ ಗದಗ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಫಿಲ್ ಹೈದರ್ ಫಾಳಿಲಿ ದುಬೈ, ಸಲಾಂ ಅಲ್ ಜುಬೈಲ್, ಸಲೀಂ ಮುಸ್ಲಿಯಾರ್ ಕುವೈತ್, ಮುಹಮ್ಮದ್ ಆಸಿಫ್ B ಅಬುಧಾಬಿ, ತ್ವಾಹಾ ರಿಯಾದ್, ಅಬ್ದುಲ್ ರಝಾಕ್ ತ್ವಾಯಿಫ್, ಇಸ್ಮಾಯಿಲ್ ಕೊಡಗು ದಮ್ಮಾಂ ಅವರನ್ನು ಆಯ್ಕೆ ಮಾಡಲಾಯಿತು
ಮನ್ಸೂರ್ ಅಲ್ ಖಾದಿರಿ ಸ್ವಾಗತಿಸಿ ಸಯ್ಯಿದ್ ಮಹಮ್ಮದ್ ಮಿದ್ಲಾಜ್ ಬಾಅಲವಿಯವರ ಪ್ರಾರ್ಥನೆಯೊಂದಿಗೆ ನೂತನ ಕಾರ್ಯದರ್ಶಿ ಅಝ್ವೀರ್ ತ್ವಾಯಿಫ್ ರವರು ಧನ್ಯವಾದಗೈದರು.