ಡಿ.ಜೆ ಹಳ್ಳಿ ಘರ್ಷಣೆ ಮತ್ತು ದಾಂದಲೆಯ ಕುರಿತಂತೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ IPS ಇವರನ್ನು ಶಿವಾಜಿ ನಗರ ಶಾಸಕ ರಿಝ್ವಾನ್ ಹರ್ಷದ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾರವರು ಬೇಟಿಯಾಗಿ ಚರ್ಚಿಸಿದರು.
ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ಅಮಾಯಕರನ್ನು ಬಂಧಿಸದಿರಿ ಹಾಗೇ ಈಗಾಗಲೇ ಬಂಧಿಸಿರುವ ಅಮಾಯಕರನ್ನು ಬಿಡುಗಡೆಗೊಳಿಸಲು ಕಮಿಷನರ್ ಅವರಲ್ಲಿ ಕೇಳಿಕೊಳ್ಳಲಾಯಿತು. ನಡೆದ ಘಟನೆಗೆ ಕಾರಣ ಮತ್ತು ಅನಂತರದ ದಾಂದಲೆಯನ್ನು ಖಂಡಿಸುತ್ತೇವೆ ಎಂದ ಜಿ. ಎ ಬಾವಾ, ಅಮಾಯಕರ ಬಂಧನದ ಮಾಹಿತಿಯನ್ನು ನೀಡಿದರು.
ಗಲಭೆ ಮಾಡಿದವರನ್ನು ಬಂಧಿಸಿ, ಅದಕ್ಕೆ ಪ್ರಚೋದನೆ ಕೊಟ್ಟವರನ್ನೂ ಕಠಿಣ ಕಾನೂನಿನಲ್ಲಿ ಶಿಕ್ಷಿಸಿ ಹಾಗೇ ಮೊದಲು ಕೇಸು ದಾಖಲಿಸಲು ಹೋದಾಗ, ನಿರ್ಲ್ಯಕ್ಷ್ಯವಹಿಸಿದ ಪೊಲೀಸರನ್ನೂ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಲಾಯಿತು. ಈಗಾಗಲೇ ಬಂಧಿಸಿರುವವರಲ್ಲಿ ನಿರಪರಾಧಿಗಳಿದ್ದರೆ ಯಾವ ಕಾರಣಕ್ಕೂ ಶಿಕ್ಷಿಸುವುದಿಲ್ಲ. ಇವತ್ತೇ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳನ್ನು ಕರೆಸಿ ಪೊಲೀಸ್ ಕಮಿಷನರ್ ಮಾತು ಕೊಟ್ಟರು.