ಮಂಗಳೂರು (ಜನಧ್ವನಿ ವಾರ್ತೆ): ದ.ಕ ಮತ್ತು ಉಡುಪಿ ಜಿಲ್ಲೆಗಳ ಹಲವು ಮಸೀದಿಗಳಲ್ಲಿ ದೀರ್ಘಕಾಲ ಖತೀಬರಾಗಿ ಸೇವೆ ಸಲ್ಲಿಸಿದ್ದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕಿನ್ಯಾ (70) ಇಂದು ವಫಾತ್ ಆದರು.
ಇವರು ಕರ್ನಾಟಕ ಸುನ್ನೀ ಆನ್‌ಲೈನ್ ಕ್ಲಾಸ್‌ರೂಮ್ ಮೀಡಿಯಾ ವಿಂಗ್ ಚೆಯರ್‌ಮ್ಯಾನ್ ಆಗಿರುವ ಮಸ್‌ಹೂದ್ ಅಲಿ ಕಿನ್ಯಾ (ಬಗ್ದಾದ್) ಮತ್ತು ಬ್ಯಾರಿ ಸಾಹಿತಿ ಬಶೀರ್ ಅಹ್ಮದ್ ಕಿನ್ಯಾರ ತಂದೆ. KSOCR ಮತ್ತು ಜನಧ್ವನಿ ಬಳಗ ತೀವ್ರ ಸಂತಾಪ ಸೂಚಿಸುತ್ತಿದೆ.
ಮೃತರು ಕಾಸರಗೋಡು, ಅರಸಿನಮಕ್ಕಿ, ಬಜ್ಪೆ ಮತ್ತು ಮಣಿಪಾಲ ಮುಂತಾದೆಡೆಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಹೆಸರಲ್ಲಿ ಸುನ್ನೀ ಸಂಘ ಕುಟುಂಬದ ಸದಸ್ಯರೆಲ್ಲಾ ಖುರ್‌ಆನ್ ಮತ್ತು ತಹ್‌ಲೀಲ್ ಹೇಳಿ ಪ್ರತ್ಯೇಕ ದುವಾ ಮಾಡಲು KSOCR ಮತ್ತು ಜನಧ್ವನಿ ಬಳಗ ವಿನಂತಿಸುತ್ತಿದೆ.