ಕರ್ನಾಟಕದ ಪ್ರಮುಖ ಸುನ್ನಿ ನೇತಾರ ಹಾಗೂ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಮತ್ತು ಸುನ್ನಿ ಯುವ ಜನ ಸಂಘ ಇದರ ಪ್ರಧಾನ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ ಎಸ್ ಅಬ್ದುಲ್ ರಹ್ಮಾನ್ ರವರ ಅಗಲುವಿಕೆ ಸುನ್ನಿ ಸಮುದಾಯಕ್ಕೆ ತುಂಬಲಾಗದ ನಷ್ಟವಾಗಿದೆ.
ಅಲ್ಲಾಹು ಅವರ ಪಾರತ್ರಿಕ ಜೀವನ ಪ್ರಕಾಶಿಸಗೊಳಿಸಲಿ.ಎಲ್ಲಾ ಸುನ್ನಿ ಕಾರ್ಯಕರ್ತರು ಅವರ ಮಗ್ಫಿರತ್ ಗಾಗಿ ದುವಾ ಹಾಗೂ ಮಯ್ಯತ್ ನಮಾಝ್ ನಿರ್ವಹಿಸಲು ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ವಿನಂತಿಸಿದ್ದು, ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.