ಮಂಗಳೂರು: ರಾಜ್ಯದ ಪ್ರಮುಖ ಸುನ್ನೀ ನಾಯಕರಾಗಿದ್ದ ಪ್ರೊಫೆಸರ್I ಡಾಕ್ಟರ್I ಎಸ್.ಅಬ್ದುಲ್ ರಹ್ಮಾನ್ (ಇಂಜಿನಿಯರ್) ತಲೆಕ್ಕಿ (61) ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಇಂದು (ಆಗಸ್ಟ್ 17 ಸೋಮವಾರ 9pm) ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ.
ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಹಾಗೂ ಸುನ್ನೀ ಯುವಜನ ಸಂಘ (SYS) ಗಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುನ್ನತ್ ಜಮಾಅತಿನ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿದ ಅವರುಪ್ರಮುಖ ಬಹುಭಾಷಾ ವಾಗ್ಮಿ,ಬರಹಗಾರ ಮತ್ತು ಚಿಂತಕರಾಗಿ ಪ್ರಶಸ್ತರಾಗಿದ್ದರು.
Islam and Science ಇಂಗ್ಲಿಷ್ ಪತ್ರಿಕೆಯನ್ನು ನಡೆಸುತ್ತಿದ್ದರು
B.E., M.Tech., PhD. ಪದವೀಧರರಾದ ಅವರು ಪಿ.ಎ.ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪ್ರೊಫೆಸರ್ ಮತ್ತು HOD (ECE) ಆಗಿದ್ದರು. ಯೇನೆಪೋಯಾ ಯುನಿವರ್ಸಿಟಿಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಹಾಗೂ ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದ ಅವರು ಪತ್ನಿ,ಆರು ಹೆಣ್ಣು ,ಎರಡು ಗಂಡು ಮಕ್ಕಳು, ಬಂಧು- ಬಳಗ,ಶಿಷ್ಯಂದಿರು ಮತ್ತು ಅಪಾರ ಅಭಿಮಾನಿ ವೃಂದವನ್ನು ಅಗಲಿದ್ದಾರೆ
ಅವರ ನಿಧನಕ್ಕೆ ಎಸ್. ವೈ.ಎಸ್.ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸ’ಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ.ಝೈನೀ ಕಾಮಿಲ್ ತೀವ್ರ ಸಂತಾಪ ಸೂಚಿಸಿ ಎಲ್ಲರೂ ಅವರ ಪರಲೋಕ ಕ್ಷೇಮಕ್ಕಾಗಿ ಪ್ರಾರ್ಥನೆ ನಡೆಸಬೇಕೆಂದು ವಿನಂತಿಸಿದ್ದಾರೆ.