ಮಂಗಳೂರು: ಮುಸ್ಲಿಮ್ ಸಮುದಾಯದ ದೂರಗಾಮಿ ಚಿಂತಕ, ಶಿಕ್ಷಣ ತಜ್ಞ, ಕೈಗಾರಿಕೋದ್ಯಮಿ, ಸಮಾಜ ಸೇವಕ, ಉದ್ಯೋಗ ನಿರ್ಮಾತೃ,ಅಂತಾರಾಷ್ಟ್ರೀಯ ಪ್ರಮುಖ ವ್ಯಕ್ತಿ ಮತ್ತು ಸಮುದಾಯದ ನಾಯಕರೂ,ಮುಸ್ಲಿಮ್ ಸೆಂಟ್ರಲ್ ಕಮಿಟಿ ಯ ಮಾಜಿ ಅಧ್ಯಕ್ಷರು ಆಗಿದ್ದ ಅಹ್ಮದ್ ಹಾಜಿ ತುಂಬೆ ಅವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಂತಾಪ ಪ್ರಕಟಿಸುತ್ತದೆ.
ಅಹ್ಮದ್ ಹಾಜಿ ತುಂಬೆ ಅವರು ಉದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ದಿಯ ಓರ್ವ ಮಾದರಿ ನಾಯಕರಾಗಿದ್ದರು,ಸಾಮಾಜಿಕ ಉನ್ನತ ಸ್ತರದ ಕುಟುಂಬವಾಗಿ ದ್ದ ತುಂಬೆ ಹಾಜಿ ರವರು,ಮಧ್ಯಮ ಮತ್ತು ಬಡ ವರ್ಗದ ಜನರ ಬಗ್ಗೆ ಅತ್ಯಂತ ಕಾಳಜಿ ವ್ಯಕ್ತಿ ಯಾಗಿದ್ದರು.ಜಿಲ್ಲೆಯ ಪ್ರಮುಖ ಮುಸ್ಲಿಮ್ ಸಂಘಟನೆಯ ನಾಯಕತ್ವ ವಹಿಸಿದ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸೃಷ್ಟಿಯಾದ ಸಾಮುದಾಯಿಕ ಹಾನಿಯನ್ನು ತಡೆಯಲು ಅವರು ತನ್ನ ಶಕ್ತಿ ಮೀರಿದ ಸ್ಪಂದನೆ ಮತ್ತು ಪ್ರಯತ್ನದ ನೇತೃತ್ವ ವಹಿಸಿದ್ದರು.ಅಹ್ಮದ್ ಹಾಜಿರವರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟ ಸೃಷ್ಟಿಸಿದೆ.
ಕೆ.ಅಶ್ರಫ್
(ಮಾಜಿ ಮೇಯರ್)
ಅಧ್ಯಕ್ಷರು,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ