janadhvani

Kannada Online News Paper

ಕೆಮ್ಮಾರ (ಜನಧ್ವನಿ ವಾರ್ತೆ): ಕೆಮ್ಮಾರ ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ವಠಾರದಲ್ಲಿ ಭಾರತ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಸಂಘಟನೆಗಳಾದ SSF ಮತ್ತು SYS ಕಾರ್ಯಕ್ರಮ ಆಯೋಜಿಸಿತ್ತು. ಕೆಮ್ಮಾರ ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾದ ಜನಾಬ್ ಇಸ್ಮಾಯೀಲ್ ಕೆಮ್ಮಾರ ಧ್ವಜಾರೋಹಣ ನೆರವೇರಿಸಿದರು.

ಖುತುಬಿಯಾ ಮದ್ರಸಾ ಕೆಮ್ಮಾರ ಇಲ್ಲಿನ ಅಧ್ಯಾಪಕರಾದ ಹಂಝ ಸ‌ಅದಿ ಕುಂತೂರು ದುಆ ನೆರವೇರಿಸಿದರು. ಹಾಫಿಳ್ ನಝೀರ್ ಸಖಾಫಿ, ಅಶ್ರಫ್ ಝುಹ್ರಿ, ಜಲೀಲ್ ಝುಹ್ರಿ, ಹನೀಫ್ ಮದನಿ ಉಪಸ್ಥಿತರಿದ್ದರು

ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಮ್ ಕೆಮ್ಮಾರ, SSF ಕೆಮ್ಮಾರ ಶಾಖಾಧ್ಯಕ್ಷ ಅನೀಸ್ ಕೆಮ್ಮಾರ, SYS ಕೆಮ್ಮಾರ ಬ್ರಾಂಚ್ ಕೋಶಾಧಿಕಾರಿ ಅಶ್ರಫ್ ಕೆಮ್ಮಾರ ಸೇರಿದಂತೆ ಜಮಾಅತ್ ಭಾಂದವರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಿಹಿ ತಿಂಡಿ ವಿತರಣೆ ಮಾಡುವ ಮೂಲಕ ಸ್ವಾತಂತ್ರ್ಯದ ಸಂತೋಷ ಹಂಚಲಾಯಿತು.

error: Content is protected !! Not allowed copy content from janadhvani.com