janadhvani

Kannada Online News Paper

ಪ್ಲಾಸ್ಮಾ ದಾನ ಮಾಡಲು ಖಾಝಿ ಬೇಕಲ ಉಸ್ತಾದ್ ಮನವಿ

ಉಡುಪಿ: ಕೊರೋನಾ ರೋಗಿಗಳಿಗೆ ಆತ್ಮ ಸ್ಥೈರ್ಯ ತುಂಬುವಂತೆಯೂ ಅಗತ್ಯವಿರುವ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿ ಮಾನವೀಯತೆಯನ್ನು ಎತ್ತಿ ಹಿಡಿಯುವಂತೆ ಖಾಝಿ ಬೇಕಲ ಉಸ್ತಾದ್ ಮನವಿ ಮಾಡಿದ್ದಾರೆ.

ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಪ್ಲಾಸ್ಮಾ ದಾನ ಮಾಡಬಾರದು ಎಂಬ ತಪ್ಪು ಕಲ್ಪನೆ ಇದ್ದು ಇದನ್ನು ಹೋಗಲಾಡಿಸಬೇಕು ಮತ್ತು ಕೊರೋನಾ ರೋಗಿಗಳ ಪಾಲಿಗೆ ಅತ್ಯವಶ್ಯಕ ವಾಗಿರುವ ಪ್ಲಾಸ್ಮಾ ವನ್ನು ರೋಗ ಶಮನಿತರು ದಾನ ನೀಡಲು ತಯಾರಗಬೇಕೆಂದು ಅವರು ಒತ್ತಿ ಹೇಳಿದ್ದಾರೆ.

ಸಧ್ಯ ಮಂಗಳೂರಿನಲ್ಲಿ ಪ್ಲಾಸ್ಮಾ ಬ್ಯಾಂಕ್ ವ್ಯವಸ್ಥೆ ಲಭ್ಯವಿಲ್ಲ ಪ್ಲಾಸ್ಮಾ ದಾನ ಮಾಡಲು ಬೆಂಗಳೂರಿಗೇ ಹೋಗಬೇಕಾದ ಅನಿವಾರ್ಯತೆ ಇದೆ.