janadhvani

Kannada Online News Paper

ಪ್ರವಾದಿ ನಿಂದಕನಿಗೆ ಗರಿಷ್ಠ ಶಿಕ್ಷೆಯಾಗಲಿ, ಎಲ್ಲರೂ ಶಾಂತಿ ಕಾಪಾಡಬೇಕು- ಶಾಫಿ ಸಅದಿ

ಬೆಂಗಳೂರು: ಜಗತ್ತಿಗೆ ಮಾನವೀಯತೆ ಮತ್ತು ಸುಸಂಸ್ಕೃತಿಯ ಸಂದೇಶ ನೀಡಿದ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಜಾಗತಿಕ ಮುಸಲ್ಮಾನರ ಹೃದಯ ಸಿಮ್ಹಾಸನದ ರಾಜಕುಮಾರ. ಅವರನ್ನು ನಿಂದನೆ ಮಾಡಿದ ಕಿಡಿಗೇಡಿಗೆ ಗರಿಷ್ಠ ಶಿಕ್ಷೆಯಾಗಲಿ ಎಂದು ಕರ್ನಾಟಕ ಮುಸ್ಲಿಮ್ ಜಮಾ ಅತ್ ಪ್ರ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ ಟ್ವಿಟರ್ ನಲ್ಲಿ ಆಗ್ರಹಿಸಿದ್ದಾರೆ.

ಕೋಮು ಪ್ರಚೋದಕ ಪೋಸ್ಟ್ ಸಂಬಂಧ ಬೆಂಗಳೂರಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಅವರು, ಕಾನೂನನ್ನು ಕೈಗೆತ್ತಿಕೊಂಡು ಪೋಲೀಸರ ವಿರುಧ್ಧ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದು ಪ್ರವಾದಿಯ ಹಿಂಬಾಲಕರಾದ ನಮ್ಮ ಶೈಲಿಯಲ್ಲ. ಎಲ್ಲರೂ ಶಾಂತಿ ಕಾಪಾಡಬೇಕು. ಕಾನೂನಾತ್ಮಕ ಹೋರಾಟದಲ್ಲಿ ನಂಬಿಕೆಯುಳ್ಳವರಾಗಬೇಕು ಎಂದಿದ್ದಾರೆ.