ಬೆಳ್ತಂಗಡಿ: ಉಪ್ಪಿನಂಗಡಿ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಳಂತಿಲ ಇಲ್ಲಿನ ವಿದ್ಯಾರ್ಥಿನಿ ಫಾತಿಮಾ ಸಈದಾ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 516 ಅಂಕಗಳನ್ನು ಗಳಿಸಿ, ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಇವರು ನೆಕ್ಕಿಲ್, ಕುಪ್ಪಟ್ಟಿಯ ಬಶೀರ್ ಮುಸ್ಲಿಯಾರ್ ಮತ್ತು ಶಮೀಮಾ ದಂಪತಿಗಳ ಪುತ್ರಿಯಾಗಿದ್ದು, ಮುಂದಕ್ಕೆ ವೈದ್ಯಕೀಯ ಶಿಕ್ಷಣದ ಗುರಿ ಹೊಂದಿರುತ್ತಾರೆ.







