ಬಾಬರಿ ಮಸೀದಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ, ತ್ರಿವಳಿ ತಲಾಖ್ ಕಾಯ್ದೆ,ಕಾಶ್ಮೀರ 370ನೇ ವಿಧಿ ರದ್ದತಿ, ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿರೋಧಿಸಿ SDPI ವತಿಯಿಂದ ಸುಳ್ಯ ದಲ್ಲಿ ಭಿತ್ತಿ ಪತ್ರ ಪ್ರದರ್ಶನ
ಸುಳ್ಯ: ಅಯೋಧ್ಯೆಯ ಬಾಬರಿ ಮಸ್ಜಿದ್ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನಡೆಸಿರುವುದನ್ನು ಖಂಡಿಸಿ ಹಾಗೂ
ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಕಾಶ್ಮೀರ ವಿಶೇಷ ಕಾಯಿದೆ 370 ರದ್ದು ಮತ್ತು ತ್ರಿವಳಿ ತಲಾಕ್ ಕಾನೂನಿನ ವಿರುದ್ಧವಾಗಿ ಎಸ್.ಡಿ.ಪಿ.ಐ ವತಿಯಿಂದ ಸುಳ್ಯದಲ್ಲಿ ಭಿತ್ತಿಪತ್ರ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಕಲಾಂ, ಕಾರ್ಯದರ್ಶಿ ಮುಸ್ತಫಾ ಎಂ.ಕೆ ,ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಪೈಚಾರ್,ಮತ್ತು ಹಲವಾರು ಕಾರ್ಯಕರ್ತರು ಭಿತ್ತಿಪತ್ರ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಿದರು.