janadhvani

Kannada Online News Paper

ವಾಟ್ಸಾಪ್ ಹೊಸ ಅಪ್ಡೇಟ್ ‘ರೂಮ್’ ವೀಡಿಯೋ ಕಾನ್ಫೆರೆನ್ಸ್ ಹೇಗೆ?

ವಿಶ್ವದ ಜನಪ್ರಿಯ ಮೆಸೆಜಿಂಗ್‌ ಆಪ್‌ ವಾಟ್ಸಾಪ್‌. ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇತ್ತೀಚಗಷ್ಟೇ ಪೇಸ್‌ಬಯಕ್‌ ಒಡೆತನದ ವಾಟ್ಸಾಪ್‌ನಲ್ಲಿ ಫೇಸ್‌ಬುಕ್ ಮೆಸೆಂಜರ್ ರೂಮ್ಸ್ ಶಾರ್ಟ್‌ಕಟ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೆಸೆಂಜರ್ ರೂಮ್ಸ್ ವೀಡಿಯೊ ಕರೆಯನ್ನು ಪ್ರಾರಂಭಿಸಲು ಬಳಕೆದಾರರಿಗೆ ಇನ್ನಷ್ಟು ಸುಲಭವಾಗಲಿದೆ.

ವಾಟ್ಸಾಪ್‌ ಮೂಲಕವೂ ಮೆಸೆಂಜರ್‌ ರೂಮ್ಸ್‌ ವೀಡಿಯೋ ಕಾಲ್‌ ಅನ್ನು ಮಾಡುವುದಕ್ಕೆ ಅವಕಾಶವನ್ನ ಫೇಸ್‌ಬುಕ್‌ ಕಲ್ಪಿಸಿದೆ. ಸದ್ಯ ವಾಟ್ಸಾಪ್‌ ಶಾರ್ಟ್‌ಕಟ್ ಮೂಲಕ ಫೇಸ್‌ಬುಕ್‌ ಮೆಸೆಂಜರ್‌ ರೂಮ್ಸ್‌ ಕಾಲ್‌ ಅನ್ನು ಬೆಂಬಲಿಸಲಿದೆ. ಸದ್ಯ ಮೆಸೆಂಜರ್ ರೂಮ್‌ಗಳು ಏಕಕಾಲದಲ್ಲಿ 50 ಜನರು ಮಾತ್ರ ಬಾಗವಹಿಸಬಹುದಾದ ವೀಡಿಯೊ ಕರೆಗಳನ್ನು ಬೆಂಬಲಿಸುತ್ತವೆ. ಆದರೆ ವಾಟ್ಸಾಪ್‌ನಲ್ಲಿಯೇ ದೊಡ್ಡ ವೀಡಿಯೊ ಕಾಲ್‌ಗಳನ್ನು ಸಕ್ರಿಯಗೊಳಿಸುವುದಿಲ್ಲ. ಆದರೂ ವಾಟ್ಸಾಪ್‌ ಮೂಲಕ ಮೆಸೆಂಜರ್‌ ರೂಮ್ಸ್‌ ಅನ್ನು ಪ್ರವೇಶಿಸಬಹುದಾಗಿದೆ.

ಹಾಗಾದ್ರೆ ವಾಟ್ಸಾಪ್‌ನಲ್ಲಿ ಫೇಸ್‌ಬುಕ್‌ ಮೆಸೆಂಜರ್ ರೂಮ್ಸ್‌ ಶಾರ್ಟ್‌ ಕಟ್‌ ಅನ್ನು ಪ್ರವೇಶಿಸುವುದು ಹೇಗೆ ?

ಹಂತ 1: ವಾಟ್ಸಾಪ್ ಚಾಟ್ ಥ್ರೆಡ್ ತೆರೆಯಿರಿ.

ಹಂತ 2: attachment ಐಕಾನ್ ಕ್ಲಿಕ್ ಮಾಡಿ.

ಹಂತ 3: Room ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ದೃಡೀಕರಣಕ್ಕಾಗಿ Continue in Messenger ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5: ಇದು Messenger Rooms platformಗೆ ನ್ಯಾವಿಗೇಟ್ ಮಾಡುತ್ತದೆ

ಹಂತ 6: ನಂತರ Create a Room ಮತ್ತು ಇಮೇಲ್, ಪಠ್ಯ ಅಥವಾ ಇತರ ಅಪ್ಲಿಕೇಶನ್‌ಗಳ ಮೂಲಕ ಲಿಂಕ್ ಅನ್ನು ಇತರರಿಗೆ ಹಂಚಿಕೊಳ್ಳಬಹುದು.

ಹಂತ 7: ನಂತರ ಅವರು ವೀಡಿಯೊ ಕರೆಗಾಗಿ ನಿಮ್ಮೊಂದಿಗೆ ಸೇರಬಹುದು.

error: Content is protected !! Not allowed copy content from janadhvani.com