ಫರಂಗಿಪೇಟೆ : ಅಮೆಮ್ಮಾರ್ ನಿವಾಸಿ, ಹಿರಿಯ ಕಾಂಗ್ರೆಸ್ ಮುಖಂಡ ಎಫ್. ಮಮ್ಮಿ (72) ರವರು ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಪುದು ಕಾಂಗ್ರೆಸ್ ಸಮಿತಿಯ ಸಂಚಾಲಕರಾಗಿ, ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಅಮೆಮ್ಮಾರ್ ಮಸೀದಿ ಆಡಳಿತ ಸಮಿತಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಪುದು ಗ್ರಾಮದ ಉಸ್ತುವಾರಿಯಾಗಿ, ಅಮೆಮ್ಮಾರ್ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಅಂಗನವಾಡಿ ಕೇಂದ್ರದ ಅಜೀವ ಸದಸ್ಯರಾಗಿಯೂ ಅವಿರತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯರ ಅಂತ್ಯಕ್ರಿಯೆಯನ್ನು ಪುದು ಗ್ರಾಮದ ಅಮೆಮ್ಮಾರ್ ಬದ್ರಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ನೆರವೇರಿತು.
ಸಂತಾಪ: ಎಫ್. ಮಮ್ಮಿಯವರ ನಿಧನಕ್ಕೆ ಮಂಗಳೂರು ಕ್ಷೇತ್ರದ ಶಾಸಕರಾದ ಯು.ಟಿ ಖಾದರ್, ಪುದು ಗ್ರಾಮ ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಖ್ತಾರ್ ಹುಸೈನ್ ಎಂ.ಎಂ, ಪುದು ತಾಲೂಕು ಪಂ. ಮಾಜಿ ಸದಸ್ಯ ಆಸೀಫ್ ಇಕ್ಬಾಲ್ ದರ್ಬಾರ್, ಪುದು ಗ್ರಾಮ ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಹಾಶೀರ್ ಪೇರಿಮಾರ್, ಪುದು ಗ್ರಾಮ ಪಂ. ಸದಸ್ಯರಾದ ಫೈಝಾಲ್ ಅಮೆಮ್ಮಾರ್, ಅಬ್ದುಲ್ ರಝಾಕ್ ಅಮೆಮ್ಮಾರ್, ರಿಯಾಝ್ ಅಮೆಮ್ಮಾರ್, ಮುಸ್ತಾಫ ಅಮೆಮ್ಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಮೇಲ್ಮನೆ, ಎಐಎಂಡಿಎಫ್ ರಾಜ್ಯ ಉಪಾಧ್ಯಕ್ಷ ಅಬೂಬಕ್ಕರ್ ಸಜೀಪ, ಗ್ರಾಮ ಪಂ. ಸದಸ್ಯೆ ಆತಿಕಾ ಅಮೆಮ್ಮಾರ್, ಮಾಜಿ ಸದಸ್ಯ ಎಂ.ಕೆ ಖಾದರ್, ಎಫ್.ಎ ಅಬ್ಬಾಸ್ ಮೊದಲಾದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.






